×
Ad

ಜೂನ್ ಒಳಗಾಗಿ ಸರ್ಕಾರಿ ಭೂ ಮಾಹಿತಿ ಆನ್‌ಲೈನ್‌ನಲ್ಲಿ

Update: 2016-02-09 08:26 IST

ನವದೆಹಲಿ: ಈ ವರ್ಷದ ಜೂನ್ ತಿಂಗಳ ಒಳಗಾಗಿ ದೇಶದಲ್ಲಿ ಲಭ್ಯವಿರುವ ಎಲ್ಲ ಸರ್ಕಾರಿ ಭೂಮಿಯ ಬಗೆಗಿನ ವಿವರಗಳು ಆನ್‌ಲೈನ್‌ನಲ್ಲಿ ಲಭ್ಯವಾಗಲಿದೆ. ಜಿಐಎಸ್ ಆಧರಿತ ಸರ್ಕಾರಿ ಭೂಮಿ ಮಾಹಿತಿಯನ್ನು ಅಭಿವೃದ್ಧಿಪಡಿಸಲಾಗುತ್ತಿದ್ದು, ಸಮಗ್ರ ಭೂ ಮಾಹಿತಿಯನ್ನು ಸಿದ್ಧಪಡಿಸಲಾಗುತ್ತಿದೆ. ಅದರಲ್ಲೂ ಮುಖ್ಯವಾಗಿ ಕೇಂದ್ರ ಸರ್ಕಾರಿ ಇಲಾಖೆಗಳು ಹಾಗೂ ಉಪ ಕಚೇರಿಗಳು ಹೊಂದಿರುವ ಭೂಮಿಯ ಒಡೆತನದ ಮಾಹಿತಿ ಆರಂಭಿಕ ಹಂತದಲ್ಲಿ ದೊರಕಿದೆ.


ಸದ್ಯಕ್ಕೆ ಸರ್ಕಾರಿ ಇಲಾಖೆಗಳಲ್ಲಿ ಅವು ಹೊಂದಿರುವ ಭೂಮಿಯ ಬಗ್ಗೆ ಸಮರ್ಪಕ ಮಾಹಿತಿ ಇಲ್ಲ. ಆದ್ದರಿಂದ ಎಷ್ಟರ ಮಟ್ಟಿಗೆ ಒತ್ತುವರಿಯಾಗಿದೆ ಎಂಬ ಬಗ್ಗೆಯೂ ದಾಖಲೆಗಳಿಲ್ಲ. ಕಳೆದ ವರ್ಷ ದೆಹಲಿ ನಗರಾಭಿವೃದ್ಧಿ ಪ್ರಾಧಿಕಾರ 1500 ಎಕರೆ ಪ್ರದೇಶದ ಮಾಹಿತಿ ಇಲ್ಲದೇ ಪೇಚಿಗೆ ಸಿಲುಕಿತ್ತು. ಇಂಥ ಹಲವು ಪ್ರಕರಣಗಳಿವೆ ಎಂದು ಅಧಿಕೃತ ಮೂಲಗಳು ಹೇಳಿವೆ.


ಈ ಮಾಹಿತಿಗಳನ್ನು ಸಂಗ್ರಹಿಸಿದ ಬಳಿಕ, ಸಾರ್ವಜನಿಕ ಸ್ಥಳ ಎಷ್ಟರ ಮಟ್ಟಿಗೆ ದುರ್ಬಳಕೆಯಾಗುತ್ತಿದೆ ಎನ್ನುವ ಸ್ಪಷ್ಟ ಚಿತ್ರಣ ದೊರಕಲಿದೆ. ಅದರ ವಿರುದ್ಧ ಕ್ರಮ ಕೈಗೊಂಡು ಅಭಿವೃದ್ಧಿ ಕಾರ್ಯಗಳ ಯೋಜನೆ ರೂಪಿಸಬಹುದಾಗಿದೆ. ಈ ಮಾಹಿತಿಯನ್ನು ಸಾರ್ವಜನಿಕವಾಗಿಯೂ ಲಭ್ಯವಾಗುವಂತೆ ಮಾಡಲಾಗುವುದು ಎಂದು ಹಿರಿಯ ಅಧಿಕಾರಿಯೊಬ್ಬರು ಹೇಳಿದರು.
ಇಂಥ ಪ್ರಯತ್ನ ದೇಶದಲ್ಲಿ ಇದೇ ಮೊದಲು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News