×
Ad

ಕರ್ನಾಟಕದ ವಿಷಯ ಮುಂದಿಟ್ಟು ರಾಹುಲ್‌ಗಾಂಧಿಗೆ ಸವಾಲೆಸೆದ ಆರೆಸ್ಸೆಸ್‌ನ ಆರ್ಗನೈಝರ್ ಪತ್ರಿಕೆ .

Update: 2016-02-09 11:30 IST

ಹೊಸದಿಲ್ಲಿ: ಕರ್ನಾಟಕದಲ್ಲಿ ತಾಂಜನೀಯದ ಮಹಿಳೆಗೆ ಕಿರುಕುಳ ನೀಡಲಾದ ಪ್ರಕರಣದ ಕುರಿತು ಕಾಂಗ್ರೆಸ್ ನಾಯಕತ್ವದ ಮೌನವನ್ನು ರಾಷ್ಟ್ರೀಯ ಸ್ವಯಂ ಸೇವಕ್ ಸಂಘದ ಆರ್ಗನೈಝರ್ ಪತ್ರಿಕೆ ಪ್ರಶ್ನಿಸಿದ್ದು ರಾಹುಲ್ ಗಾಂಧಿ ಉತ್ತರಿಸಬೇಕೆಂದು ಸವಾಲೆಸೆದಿದೆ.ಆರ್ಗನೈಝರ್‌ನಲ್ಲಿ ಶೇಮ್ ಆಫ್ ಸೆಲೆಕ್ಟಿವ್ ಔಟ್ರೆಜ್ ಶೀರ್ಷಿಕೆಯಲ್ಲಿ ಪ್ರಕಟವಾದ ಸಂಪಾದಕೀಯದ ಪ್ರಕಾರ ದಾದರಿ ಮತ್ತು ಹೈದರಾಬಾದ್ ಹೋದ ರಾಹುಲ್ ಗಾಂಧಿ ತನ್ನ ಪಕ್ಷದ ಮುಖ್ಯಮಂತ್ರಿಗೆ ಫೋನ್ ಮಾಡಿ ಕೇಳುವಷ್ಟು ಸಂಯಮ ಪ್ರದರ್ಶಿಸಿಲ್ಲ.

ಈ ಭಯಾನಕ ಘಟನೆಯ ಕುರಿತು ಅವರು ಎಂತಹ ಕ್ರಮ ತೆಗೆದುಕೊಂಡಿದ್ದಾರೆ ಎಂದು ಪ್ರಶ್ನಿಸಲಾಗಿದೆ. ಲೇಖನವು ಈ ನಾಚಿಕೆಗೇಡಿನ ಕೃತ್ಯ ದೇಶಕ್ಕಾದ ಅಪಮಾನವಾಗಿದೆ. ಸಕಲ ಕೆಟ್ಟ ವಸ್ತುಗಳಿಗಾಗಿ ಸಂಘವನ್ನು ಹೊಣೆಮಾಡಲಾಗುತ್ತಿದೆ. ಇಂತಹ ಯಾವುದೇ ಅವಕಾಶವನ್ನು ಕಳಕೊಳ್ಳದಿರುವ ರಾಹುಲ್‌ಗಾಂಧಿ ಈ ಘಟನೆಯ ಮೂಲಕ ಜಾಗೃತರಾಗಬೇಕು ತನ್ನ ನೀತಿಯನ್ನು ಕೈಬಿಡಬೇಕು.

ಅಲ್ಲದಿದ್ದರೆ ಒಂದು ವಂಶದ ಸಂಚಾಲನೆಯಲ್ಲಿರುವ ಹಳೆಯ ಪಕ್ಷಕ್ಕಾಗಿ ಈಗ ಅದರ ಬಳಿ ಇರುವ ಸ್ವಲ್ಪವಾದರೂ ರಾಜಕೀಯ ಜಮೀನು ಉಳಿದುಕೊಳ್ಳುವುದು ಕಷ್ಟಕರವೆಂದು ಅದು ಬರೆದಿದೆ. ಆರ್ಗನೈಝರ್ ಪ್ರಕಾರ ಕರ್ನಾಟಕದಲ್ಲಿ ಇದೊಂದೇ ಘಟನೆ ನಡೆದಿಲ್ಲ. ಕರ್ನಾಟಕದ ಅಪರಾಧ ಗ್ರಾಫ್ ಹೆಚ್ಚಳವಾಗಿದೆಮತ್ತು ಭಯೋತ್ಪಾದಕ ಚಟುವಟಿಕೆಗಳಲ್ಲಿಯೂ ಹೆಚ್ಚಳವಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News