ಉತ್ತರಪ್ರದೇಶದಲ್ಲಿ ಆಕ್ರಮಣಕಾರಿ ಹಿಂದುತ್ವದೆಡೆಗೆ ಬಿಜೆಪಿ!
ಮುಝಪ್ಫರ್‌ನಗರ್: ರಾಮ್‌ಮಂದಿರ, ತುಷ್ಟೀಕರಣ,ಲವ್‌ಜಿಹಾದ್ ಮತ್ತು ಭಯೋತ್ಪಾದನೆ ವಿಷಯಗಳನ್ನು ಮುಂದಿಟ್ಟು ಉತ್ತರ ಪ್ರದೇಶದ ವಿಧಾನಸಭೆಯ 2017ರ ಚುನಾವಣೆಯಲ್ಲಿ ಬಿಜೆಪಿ ಕಣಕ್ಕಿಳಿಯುವ ಸೂಚನೆಯನ್ನು ನೀಡಿದೆ. ಇದು ಉತ್ತರ ಪ್ರದೇಶದಲ್ಲಿ ತನ್ನ ಶಕ್ತಿಯನ್ನು ವಿಸ್ತರಿಸಲು ಉಪಯುಕ್ತವಾಗಲಿದೆ ಎಂದು ಅದು ನಂಬಿದೆ. ಜೊತೆಗೆ ಫೆ. 13ರಂದು ನಡೆಯಲಿರುವ ಪಶ್ಚಿಮ ಉತ್ತರ ಪ್ರದೇಶದ ಮುಝಪ್ಫರ್ ನಗರ್ ಮತ್ತು ದೇವ್‌ಬಂದ್ ಉಪಚುನಾವಣೆಯು ನಡೆಯಲಿದ್ದು ಇಲ್ಲಿನ ಫಲಿತಾಂಶ ಇದಕ್ಕೊಂದು ರಹದಾರಿಯಾಗಲಿದೆ ಎಂದು ಅಮರುಜಾಲ ಡಾಟ್ ಕಮ್ ವರದಿ ಮಾಡಿದೆ.
ಮುಝಪ್ಫರ್ ನಗರ್‌ನಲ್ಲಿ ಚುನಾವಣೆ ಸಭೆಯನ್ನು ಉದ್ದೇಶಿಸಿ ಮಾತಾಡಿದ ಬಿಜೆಪಿ ನಾಯಕ ಉಮೇಶ್ ಮಾಲಿಕ್ ಯಾವ ರೀತಿ 2013ರಲ್ಲಿಒಂದು ಕಿಡಿ ಅಲೆಯಾಗಿ ಕೆಲಸ ಮಾಡಿತ್ತೋ. ಅದು ನರೇಂದ್ರ ಮೋದಿಯನ್ನು ಪ್ರಧಾನಿ ಮಂತ್ರಿ ಮಾಡಿತ್ತೋ. ಅದೇ ರೀತಿ ಪಶ್ಚಿಮ ಉತ್ತರ ಪ್ರದೇಶದ ಈ ಚುನಾವಣೆ ಮತ್ತೊಮ್ಮೆ ರಾಜ್ಯದಲ್ಲಿ ಬಿಜೆಪಿ ಅಧಿಕಾರ ಹಿಡಿಯುವ ದಾರಿಯನ್ನು ಸುಗಮಗೊಳಿಸುವುದು ಎಂದಿದ್ದಾರೆ. 2013ರಲ್ಲಿ ಮುಝಪ್ಫರ್‌ನಗರ್ ದಂಗೆಯಾಗಿತ್ತು. ಆನಂತರ 2014ರಲ್ಲಿ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಉತ್ತರಪ್ರದೇಶದಲ್ಲಿ ಉತ್ತಮ ಪ್ರದರ್ಶನ ಮಾಡಿತ್ತು.
2017ರಲ್ಲಿ ನಡೆಯುವ ವಿಧಾನಾಸಭಾ ಚುನಾವಣೆಯಲ್ಲಿ ಪಾರ್ಟಿ ಹೆಚ್ಚು ಸ್ಥಾನ ಗಳಿಸಿ ಅಧಿಕಾರಕ್ಕೆ ಬರಲಿದೆ ಎಂದು ಬಿಜೆಪಿಗೆ ಅನಿಸಿದೆ. ಆದುದರಿಂದ ದಂಗೆಯ ಆರೋಪ ಹೊತ್ತಿರುವ ಎಲ್ಲ ನಾಯಕರನ್ನು ಉಪಚುನಾವಣೆಯ ಪ್ರಚಾರದಲ್ಲಿ ಅದು ತೊಡಗಿಸಿದೆ. 2014ರ ಲೋಕಸಭಾ ಚುನಾವಣೆಯ ಹಿನ್ನೆಲೆ ಮುಂದಿಟ್ಟು ಈ ಉಪಚುನಾವಣೆಯಲ್ಲಿ ಪ್ರಚಾರ ಬಿಜೆಪಿ ನಡೆಯುತ್ತಿದೆ. 2014ರ ಚುನಾವಣೆಯಂತೆ ಸದ್ಯ ಈ ಉಪಚುನಾವಣೆಯಲ್ಲಿಯೂ ಆಕ್ರಮಣಕಾರಿ ಪ್ರಚಾರಕ್ಕಿಳಿದಿದೆ. ಚುನಾವಣಾ ಪ್ರಚಾರ ಸಭೆಗಳಲ್ಲಿ ಅದರ ನಾಯಕರು ಪ್ರಚೋದಕ ಭಾಷಣ ಮಾಡುತ್ತಿದ್ದಾರೆ.
ರವಿವಾರ ಬಿಜೆಪಿ ಶಾಸಕ ಸುರೇಶ್ ರಾಣ ದೇವಬಂದ್‌ನ ಸಭೆಯೊಂದರಲ್ಲಿ "ಪಠಾಣ್ ಕೋಟ್‌ನಲ್ಲಿ ನಡೆದ ದಾಳಿಗೆ ಸಂಚು ದೇವ್ ಬಂದ್‌ನಲ್ಲಿಯೇ ನಡೆದಿತ್ತು" ಎಂದು ಪ್ರಚೋದಿಸಿ ಬಿಟ್ಟಿದ್ದಾರೆ.