ಪಿಲಿಬಿತ್‌ನಲ್ಲಿ ಆರುವರ್ಷದ ಬಾಲಕಿಯ ಅತ್ಯಾಚಾರ, ಹತ್ಯೆ: ಶಂಕಿತನ ಬಂಧನ

Update: 2016-02-09 10:24 GMT


 ಫಿಲಿಬಿತ್: ನಿನ್ನೆ ಬಾಲಕಿ ಮನೆಯ ಅಂಗಳದಲ್ಲಿ ಆಡುತ್ತಿದ್ದಳು. ಆನಂತರ ಅನಿರೀಕ್ಷಿತವಾಗಿ ನಾಪತ್ತೆಯಾಗಿದ್ದಳು. ಎಷ್ಟೇ ಹುಡುಕಿದರೂ ಪತ್ತೆಯಾಗಲಿಲ್ಲ. ಆರುವರ್ಷದ ಮುಗ್ಧ ಬಾಲಕಿಯ ಹತ್ಯೆಯ ಕುರಿತು ಮನೆಯವರು ಹೀಗೆ ತಮ್ಮ ದುಃಖ ತೋಡಿಕೊಂಡಿದ್ದಾರೆ. ಉತ್ತರ ಪ್ರದೇಶದ ಫಿಲಿಬಿತ್‌ನಲ್ಲಿ ಹಠಾತ್ ನಾಪತ್ತೆಯಾದ ಬಾಲಕಿ ಶವವಾಗಿ ಪತ್ತೆಯಾದ್ದರಿಂದ ಉದ್ವಿಘ್ನ ಸ್ಥಿತಿ ನಿರ್ಮಾಣವಾಯಿತು. ಪಿಲಿಬಿತ್‌ನ ಪಿಪರಾ ಮುಜಾಪ್ತ ಗ್ರಾಮದಲ್ಲಿ ಈ ಬಾಲಕಿಯ ಶವ ಖಾಲಿಯಾಗಿದ್ದ ಒಂದು ಪ್ಲಾಟ್‌ನಲ್ಲಿ ದೊರಕಿದೆ. ಅವಳ ಕುತ್ತಿಗೆ ಮತ್ತು ಕಾಲಿನಲ್ಲಿ ಗಾಯಗಳಾಗಿವೆ. ಸಲ್ವಾರ್ ರಕ್ತಸಿಕ್ತಗೊಂಡಿದೆ. ಆದ್ದರಿಂದ ಮನೆಯವರು ಇವಳನ್ನು ಅತ್ಯಾಚಾರವೆಸಗಿ ಹತ್ಯೆಗೈಯಲಾಗಿದೆ ಎಂದು ದೂರಿದ್ದಾರೆ.

ಬಾಲಕಿಯ ತಂದೆಯ ದೂರಿನ ಆಧಾರದಲ್ಲಿ ಶಂಕಿತ ರಾಮ್ ಸೇವಕ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಆದಿತ್ಯವಾರ ಸಂಜೆ ಐದು ಗಂಟೆ ಹೊತ್ತಿಗೆ ಬಾಲಕಿ ಮನೆಯ ಹೊರಗೆ ಆಡುತ್ತಿದ್ದಳು. ಹತ್ತಿರದಲ್ಲಿರುವ ತನ್ನ ಮಾವನ ಮನೆಗೂ ಹೋಗಿದ್ದಳು. ಆನಂತರ ಅವಳು ಕಾಣೆಯಾಗಿದ್ದಳು. ಪೊಲೀಸರು ಈಗ ಶಂಕಿತನ ವಿರುದ್ಧ ಬಾಲಕಿಯ ಹತ್ಯೆ ಅತ್ಯಾಚಾರ ಪ್ರಕರಣವನ್ನು ದಾಖಲಿಸಿ ವಿಚಾರಣೆ ನಡೆಸುತ್ತಿದ್ದಾರೆ. ರವಿವಾರದಂದು ಇಡೀ ರಾತ್ರಿ ಮನೆಯವರೆಲ್ಲ ಸೇರಿ ಬಾಲಕಿಯನ್ನು ಹುಡುಕಿದ್ದರು.ಮರುದಿನ ಸೋಮವಾರ ಇನ್ನೂರು ಮೀಟರ್ ದೂರದಲ್ಲಿದ್ದ ಖಾಲಿ ಪ್ಲಾಟ್‌ವೊಂದಕ್ಕೆ ಗ್ರಾಮಸ್ಥರಾದ ಅಜಯ್ ಎಂಬವರ ಮಗಳು ಯಾವುದೋ ಕೆಲಸದ ನಿಮಿತ್ತ ಹೋಗಿದ್ದಾಗ ಅಲ್ಲಿ ನಾಪತ್ತೆಯಾದ ಬಾಲಕಿಯ ಶವ ಕಂಡು ಬಂದಿತ್ತು. ವಿಷಯ ತಿಳಿದು ಪೊಲೀಸರು ಧಾವಿಸಿಬಂದಿದ್ದಾರೆ. ಶಂಕಿತನನ್ನು ಬಂಧಿಸಿವಿಚಾರಣೆಯನ್ನು ಮುಂದುವರಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News