ಪ್ರೇಯಸಿಯ ಹತ್ಯೆ ಆರೋಪದಲ್ಲಿ ನವ ವಿವಾಹಿತನ ಬಂಧನ!

Update: 2016-02-09 11:06 GMT

ಹೊಸದಿಲ್ಲಿ: ಕಾಲೇಜು ವಿದ್ಯಾರ್ಥಿನಿಯೊಬ್ಬಳ ಹತ್ಯೆ ಪ್ರಕರಣದಲ್ಲಿ ಆಕೆಯ ಪ್ರಿಯತಮನನ್ನೇ ದಿಲ್ಲಿ ಪೊಲೀಸರು ಬಂಧಿಸಿದ್ದಾರೆ. ತನ್ನ ಗೆಳೆತಿಯಾದ ಕಾಲೇಜು ವಿದ್ಯಾರ್ಥಿನಿಯೊಬ್ಬಳ ಶವವನ್ನು ಇತ್ತೀಚೆಗೆ ಪೊಲೀಸರು ನವ ವಿವಾಹಿತನ ಮನೆಯಲ್ಲಿ ಪತ್ತೆ ಹಚ್ಚಿದ್ದರು. ಪೊಲೀಸರ ಪ್ರಕಾರ ಆರೋಪಿ ನವೀನ್ ಮತ್ತು ಹತ್ಯೆಯಾದ ಆರ್ಜೂ ಪರಸ್ಪರ ಪ್ರೀತಿಸುತ್ತಿದ್ದರು.

ಇದು ತಿಳಿದು ಹುಡುಗಿ ಕಡೆಯವರು ಮದುವೆಯಪ್ರಸ್ತಾವ ತೆಗೆದುಕೊಂಡು ನವೀನ್‌ನಮನೆಗೆ ಹೋಗಿದ್ದರು. ಆದರೆ ನವೀನ್‌ನ ಮನೆಯವರು ಅದಕ್ಕೊಪ್ಪಿರಲಿಲ್ಲ. ಇವರಿಬ್ಬರದು ಅಣ್ಣ ತಮ್ಮನ ಸಂಬಂಧವಾಗಿದೆ ಆದ್ದರಿಂದ ಮದುವೆ ಸಾಧ್ಯವಿಲ್ಲ ಎಂದು ನವೀನ್‌ನ ಮನೆಯವರು ಆರ್ಜೂಳ ಮನೆಯವರಿಗೆ ಹೇಳಿ ವಾಪಸು ಕಳಿಸಿದ್ದರು. ಆನಂತರವೂ ನವೀನ್ ಹಾಗೂ ಆರ್ಜೂ ಪರಸ್ಪರ ಭೇಟಿಯಾಗುತ್ತಿದ್ದರು.

ಈ ಸುದ್ದಿ ಮನೆಯವರಿಗೆ ತಿಳಿದಿತ್ತು. ಆದ್ದರಿಂದ ಎರಡು ಕುಟುಂಬಗಳ ನಡುವೆ ನಾಲ್ಕು ತಿಂಗಳ ಹಿಂದೆ ರಾಜಿಪಂಚಾಯತಿ ನಡೆದಿತ್ತು. ಅದರಲ್ಲಿ ಎರಡೂ ಕುಟುಂಬವೂ ತಮ್ಮ ತಮ್ಮ ಮಕ್ಕಳನ್ನು ನಿಯಂತ್ರಿಸಿಟ್ಟುಕೊಳ್ಳಬೇಕೆಂದು ತೀರ್ಪಾಗಿತ್ತು. ಆದರೆ ಆರ್ಜೂ ನವೀನ್‌ನ್ನು ಮದುವೆಯಾಗಲು ಹಠಹಿಡಿದಿದ್ದರಿಂದ ನವೀನ್ ಅವಳನ್ನು ಪಕ್ಕದ ಗ್ರಾಮವೊಂದಕ್ಕೆ ಕರೆದುಕೊಂಡು ಹೋಗಿ ಕೊಂದು ಅವಳ ಶವವನ್ನು ಮನೆಯಲ್ಲಿ ಅಡಗಿಸಿಟ್ಟಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಆದರೆ ಮೃತಳ ಮನೆಯವರು ಪೊಲೀಸರ ಈ ಹೇಳಿಕೆಯನ್ನು ಒಪ್ಪಿಕೊಂಡಿಲ್ಲ. ನವೀನ್‌ನ ತಂದೆ ರಾಜ್‌ಕುಮಾರ್ ಒಬ್ಬ ವ್ಯಕ್ತಿಯ ಹತ್ಯೆ ಪ್ರಕರಣದಲ್ಲಿ ಜೈಲುಪಾಲಾಗಿತನ್ನ ಮಗನ ಮದುವೆಗಾಗಿ ಕೆಲವು ದಿನಗಳ ಹಿಂದೆ ಪೆರೋಲ್‌ನಲ್ಲಿ ಜೈಲಿಂದ ಹೊರಗೆ ಬಂದಿದ್ದ. ಈಕೊಲೆಯಲ್ಲಿ ಅವನ ಪಾತ್ರವೇನು ಎಂದು ವಿಚಾರಣೆ ನಡೆಯುತ್ತಿದೆ. ಫೆಬ್ರವರಿ 2ರಂದು ಆರ್ಜೂ ನಾಪತ್ತೆಯಾಗಿದ್ದಾಳೆಂದು ದೂರು ನೀಡಲಾಗಿತ್ತು.

ಆದರೂ ಪೊಲೀಸರು ಪ್ರಕರಣದಲ್ಲಿ ನಿರುತ್ಸಾಹ ತೋರಿಸಿದ್ದರು. ಘಟನೆ ನಡೆದಂದು ನಾಲ್ಕು ಗಂಟೆಯಿಂದ ಆರ್ಜೂಳ ಮೊಬೈಲ್ ಫೋನ್ ಬಂದ್ ಆಗಿತ್ತು. ಅವಳ ಫೋನ್‌ನಂಬರ್ ಆಧಾರದಲ್ಲಿ ಅವಳಿರುವ ಜಾಗವನ್ನು ಪತ್ತೆಮಾಡುವ ಗೋಜಿಗೂ ಅವರು ಹೋಗಿರಲಿಲ್ಲ. ಅಥವಾ ಅವಳು ಕಲಿಯುತ್ತಿದ್ದ ಕಾಲೇಜ್‌ಗೂ ಹೋಗಿ ಅಂದು ತನಿಖೆ ನಡೆಸಿರಲಿಲ್ಲ. ಆರ್ಜೂಳ ಮನೆಯವರು ಕಾಲೇಜಿನಿಂದ ಹಿಂದುರುಗದ ತನ್ನ ಮಗಳ ಕುರಿತು ನವೀನನ ಮೇಲೆಯೇಶಂಕೆ ವ್ಯಕ್ತಪಡಿಸಿದರು. ಆದರೆ ಅಂದು ಪೊಲೀಸರು ನವೀನನ್ನು ಪ್ರಶ್ನಿಸಲಿಲ್ಲ. ಫೆಬ್ರವರಿ ಐದರಂದು ಆತನ ಮದುವೆ ಆಗಿತ್ತು. ಪೊಲೀಸರು ಮೂರು ದಿನಗಳ ಬಳಿಕ ಫೆ. ಆರರಂದು ನವೀನ್‌ನ್ನು ಠಾಣೆಗೆ ಕರೆಸಿಕೊಂಡು ತನಿಖೆ ನಡೆಸಿದ್ದರು. ಅವನನ್ನು ಮದುವೆಯಾಗಲು ಹಠಹಿಡಿದಿದ್ದ ಆರ್ಜೂಳನ್ನು ತನ್ನದಾರಿಯಿಂದ ದೂರ ಮಾಡಲಿಕ್ಕಾಗಿ ಹತ್ಯೆಯೆಸಗಿದ್ದ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News