ನಿರಾಶೆಯಾಗಿದೆ; ಪ್ರಯತ್ನ ಮುಂದುವರಿಸುವೆ: ಝುಕರ್‌ಬರ್ಗ್
Update: 2016-02-09 19:59 IST
ವಾಶಿಂಗ್ಟನ್, ಫೆ. 9: ಮುಕ್ತ ಅಂತರ್ಜಾಲದ ಕುರಿತಂತೆ ಭಾರತ ತೆಗೆದುಕೊಂಡಿರುವ ನಿಲುವಿಗೆ ನಿರಾಶೆ ವ್ಯಕ್ತಪಡಿಸಿರುವ ಫೇಸ್‌ಬುಕ್ ಮುಖ್ಯಸ್ಥ ಮಾರ್ಕ್ ಝುಕರ್‌ಬರ್ಗ್, ಭಾರತ ಮತ್ತು ಜಗತ್ತಿನಾದ್ಯಂತ ಇರುವ ಸಂಪರ್ಕ ತಡೆಗಳನ್ನು ತೆಗೆದುಹಾಕುವ ನಿಟ್ಟಿನಲ್ಲಿ ಕೆಲಸ ಮಾಡಲು ಬದ್ಧನಾಗಿದ್ದೇನೆ ಎಂದು ಹೇಳಿದ್ದಾರೆ.
‘‘ಇಂಟರ್‌ನೆಟ್.ಆರ್ಗ್ ಹಲವು ಉದ್ದೇಶಗಳನ್ನು ಹೊಂದಿದೆ. ಪ್ರತಿಯೊಬ್ಬರಿಗೂ ಇಂಟರ್‌ನೆಟ್ ಲಭಿಸುವವರೆಗೆ ನಾವು ಕೆಲಸ ಮಾಡುತ್ತೇವೆ’’ ಎಂದು ಸೋಮವಾರ ಫೇಸ್‌ಬುಕ್‌ನಲ್ಲಿ ಹಾಕಿದ ಸಂದೇಶವೊಂದರಲ್ಲಿ ಝುಕರ್‌ಬರ್ಗ್ ಹೇಳಿದ್ದಾರೆ.
ಮುಕ್ತ ಅಂತರ್ಜಾಲಕ್ಕೆ ಸಂಬಂಧಿಸಿ ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ (ಟ್ರಾಯ್) ತೆಗೆದುಕೊಂಡ ನಿಲುವಿಗೆ ಪ್ರಥಮ ಪ್ರತಿಕ್ರಿಯೆಯಾಗಿ ಅವರು ಈ ಸಂದೇಶವನ್ನು ಹಾಕಿದ್ದಾರೆ.