29 ಬ್ಯಾಂಕ್ಗಳಿಂದ ಕಾರ್ಪೊರೇಟ್ಗಳ 1.14 ಲಕ್ಷ ಕೋಟಿ ರೂ. ಸಾಲ ವಜಾ!
ಹೊಸದಿಲ್ಲಿ:ದೇಶದದಲ್ಲಿ 29 ಸಾರ್ವಜನಿಕ ಬ್ಯಾಂಕ್‌ಗಳು ಎರಡು ವರ್ಷಗಳಲ್ಲಿ ಬೃಹತ್ ಕಾರ್ಪೊರೇಟ್ ಕುಳಗಳ 1.14 ಲಕ್ಷ ಕೋಟಿ ರೂ. ವಸೂಲಾಗದ ಸಾಲವನ್ನು ವಜಾಮಾಡಿವೆ. ಇದು ಇದಕ್ಕಿಂತ ಮೊದಲಿನ ಒಂಬತ್ತು ವರ್ಷಗಳಿಗಿಂತ ಹೆಚ್ಚಿನ ಮೊತ್ತವನ್ನು ಈ ಅವಧಿಯಲ್ಲಿ ಬ್ಯಾಂಕ್‌ಗಳು ವಜಾ ಮಾಡಿವೆ. 2013-15ರ ಆರ್ಥಿಕ ವರ್ಷದಲ್ಲಿ ಇಷ್ಟು ಭಾರೀ ಮೊತ್ತವನ್ನು ಈ ಬ್ಯಾಂಕ್‌ಗಳು ವಜಾ ಮಾಡಿವೆ. ಸಾರ್ವಜನಿಕ ಬ್ಯಾಂಕುಗಳ ಪುನಶ್ಚೇತನಕ್ಕೆ ಸರಕಾರ ಪ್ರಯತ್ನಿಸುವ ವೇಳೆ ಇಷ್ಟು ಹಣವನ್ನು ಬ್ಯಾಂಕುಗಳು ಸುಖಾಸುಮ್ಮನೆ ಕಳಕೊಳ್ಳಬೇಕಾಯಿತು. ಇಂಡಿಯನ್ ಎಕ್ಸ್‌ಪ್ರೆಸ್ ಪತ್ರಿಕೆ ನೀಡಿದ ಮಾಹಿತಿ ಹಕ್ಕು ಮನವಿ ಪ್ರಕಾರ ಆರ್‌ಬಿಐ ಈ ಮಾಹಿತಿಯನ್ನು ನೀಡಿದೆ.
2013-15ರ ಅವಧಿಯಲ್ಲಿ ಯಾರೆಲ್ಲರ ಸಾಲಗಳನ್ನು ವಜಾಮಾಡಲಾಗಿದೆ ಎಂಬ ಪ್ರಶ್ನೆಗೆ ರಿಸರ್ವ್‌ಬ್ಯಾಂಕ್ ಅದು ತಮಗೆ ಗೊತ್ತಿಲ್ಲ ಎಂದು ಉತ್ತರಿಸಿದೆ. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಅತಿಹೆಚ್ಚು ಹಣ ವಜಾಮಾಡಿದೆ. 21,313ಕೋಟಿ ರೂ. ವಸೂಲಾಗದ ಸಾಲವೆಂದು ಬರೆದು ಫೈಲನ್ನು ಅದು ಮೂಲೆಗೆಸೆದಿದೆ. ಇತರ ಸಾರ್ವಜನಿಕ ಕ್ಷೇತ್ರದ ಬ್ಯಾಂಕುಗಳಿಗೆ ಹೋಲಿಸಿದರೆ ಇದು ಶೇ. 40ರಷ್ಟಾಗುವುದು. 2014ರಲ್ಲಿ ಪಂಜಾಬ್ ನ್ಯಾಶನಲ್ ಬ್ಯಾಂಕ್6587ಕೋಟಿರೂ> ವಸೂಲಾಗದ ಸಾಲವೆಂದು ಬರೆದು ಫೈಲನ್ನು ಮುಚ್ಚಿದೆಇದರಲ್ಲಿ ಸ್ಟೇಟ್ ಬ್ಯಾಂಕ್ ಸೌರಾಷ್ಟ್ರ ಮತ್ತು ಇಂಡೋರ್‌ಗಳು ವಸೂಲಾಗದ ಸಾಲವನ್ನು ವಜಾಮಾಡಲು ಹೋಗಿಲ್ಲ.