ಭಾಷಣ ಸ್ಪರ್ಧೆ: ಶಿರ್ವ ಎಸ್‌ಎಂಎಸ್‌ಗೆ ಪ್ರಶಸ್ತಿ

Update: 2016-02-09 18:28 GMT


ಉಡುಪಿ, ಫೆ.9: ಕಲ್ಯಾಣಪುರ ಮಿಲಾಗ್ರಿಸ್ ಕಾಲೇಜಿನ ಸ್ಥಾಪಕ ಡಿ.ಜೆ.ಡಿಸೋಜ ಸ್ಮರಣಾರ್ಥ ಕಾಲೇಜಿನ ದೃಕ್ ಶ್ರವಣ ಸಭಾಂಗಣದಲ್ಲಿ ಇತ್ತೀಚೆಗೆ ಏರ್ಪಡಿಸಲಾದ ಅಂತರ್‌ಕಾಲೇಜು ಭಾಷಣ ಸ್ಪರ್ಧೆಯ ಪರ್ಯಾಯ ಫಲಕವನ್ನು ಶಿರ್ವದ ಸಂತ ಮೇರಿಸ್ ಕಾಲೇಜು ಗೆದ್ದುಕೊಂಡಿತು.
ಶಿರ್ವ ಸಂತ ಮೇರೀಸ್ ಕಾಲೇಜಿನ ಫಾನ್ಸಿಟಾ ಸ್ಟೆಫಿ ಮಿನೇಜಸ್ ಪ್ರಥಮ, ಅದೇ ಕಾಲೇಜಿನ ರೀಶೆಲ್ ಫೆೆರ್ನಾಂಡಿಸ್ ದ್ವಿತೀಯ, ಉಡುಪಿ ಪೂರ್ಣಪ್ರಜ್ಞ ಕಾಲೇಜಿನ ನಬೀಲಾ ತೃತೀಯ ಬಹುಮಾನವನ್ನು ಪಡೆದರು. ‘ಮಹಿಳಾ ಕಾನೂನು ಮತ್ತು ಪ್ರಸ್ತುತ ಸಮಾಜ’ ಎಂಬ ವಿಷಯದ ಕುರಿತು ನಡೆದ ಸ್ಪರ್ಧೆಯಲ್ಲಿ 14 ಕಾಲೇಜುಗಳ 25 ವಿದ್ಯಾರ್ಥಿಗಳು ಭಾಗವಹಿಸಿದ್ದರು. ಸ್ಪರ್ಧೆಯನ್ನು ಕಾಲೇಜಿನ ಪ್ರಾಂಶುಪಾಲ ಡಾ.ನೇರಿ ಕರ್ನೆಲಿಯೊ ಉದ್ಘಾಟಿಸಿದರು. ವಿದ್ಯಾರ್ಥಿ ನಾಯಕಿ ಸಿಲ್ವಿನಾ ಅಕ್ವಿನೆಸ್ ಸ್ವಾಗತಿಸಿದರು. ವಿದ್ಯಾರ್ಥಿನಿ ರೊಸಾಲಿಯ ಕಾರ್ಡೋಜ ಕಾರ್ಯಕ್ರಮ ನಿರೂಪಿಸಿದರು. ಪ್ರೊ.ನಾರಾಯಣ ಹೆಗಡೆ ಹಾಗೂ ನಿಕಿತಾ ಮಿನೇಜಸ್ ನಿರ್ಣಾಯಕರಾದ್ದರು.
 ಸಮಾರೋಪ ಸಮಾರಂಭದಲ್ಲಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ವಿದ್ಯಾರ್ಥಿ ಕ್ಷೇಮ ಪಾಲನಾ ಸಮಿತಿಯ ನಿರ್ದೇಶಕ ಪ್ರೆೊ. ಸುಬ್ರಹ್ಮಣ್ಯ ಜೋಶಿ, ಸೋಫಿಯ ಡಾಯಸ್, ವಿದ್ಯಾರ್ಥಿ ನಾಯಕಿ ಸಿಲ್ವೀನಾ ಅಕ್ಷಿನಸ್ ಉಪಸ್ಥಿತರಿದ್ದರು. ಭವಂತ್ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News