ಯಾರಿಗೆ ಬೀಫ್ ತಿನ್ನದೆ ಇರಲು ಅಸಾಧ್ಯವೊ ಅಂತವರು ಹರ್ಯಾಣಕ್ಕೆ ಕಾಲಿಡಬೇಡಿ: ಸಚಿವ ಅನಿಲ್ ವಿಜ್

Update: 2016-02-10 07:42 GMT

ಹೊಸದಿಲ್ಲಿ, ಫೆ.10: ಬೀಫ್ ತಿನ್ನದೆ ಬದುಕಲು ಯಾರಿಗೆ ಸಾಧ್ಯವಿಲ್ಲವೋ ಅಂತವರು ಹರ್ಯಾಣಕ್ಕೆ ಭೇಟಿ ನೀಡಬೇಡಿ ಹೀಗೆಂದವರು ಹರ್ಯಾಣದ ಆರೋಗ್ಯ ಸಚಿವ ಅನಿಲ್ ವಿಜ್.
ಹರ್ಯಾಣದಲ್ಲಿ ಗೋ ರಕ್ಷಣಾ ಕಾನೂನು ಜಾರಿಯಲ್ಲಿರುವ ಕಾರಣ ಇಲ್ಲ. ಗೋ ಹತ್ಯೆ ನಿಷೇಧ.
‘‘ ಕೆಲವು ದೇಶಗಳಿಗೆ ನಾವು ಹೋಗಲು ಇಷ್ಟಪಡುವುದಿಲ್ಲ. ಯಾಕೆಂದರೆ ಅಲ್ಲಿನ ಆಹಾರ ಪದ್ದತಿ ನಮಗೆ ಹಿಡಿಸುವುದಿಲ್ಲ. ಅದೇ ರೀತಿ ಯಾರಿಗೆ ಬೀಫ್ ತಿನ್ನದೆ ಇರಲು ಅಸಾಧ್ಯವೋ ಅಂತವರು ಇಲ್ಲಿಗೆ ಬರಬೇಡಿ’’ ಎಂದು ಸಚಿವ ಅನಿಲ್ ವಿಜ್ ಹೇಳಿದರು.  

ರಾಜ್ಯದಲ್ಲಿ ವಿದೇಶಿಯರಿಗೆ ಬೀಫ್ ತಿನ್ನಲು ಅನುಮತಿ ನೀಡಬೇಕೆಂಬ ಬೇಡಿಕೆಯನ್ನು ಹರ್ಯಾಣದ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್ ಸೋಮವಾರ ನಿರಾಕರಿಸಿದ್ದರು.ರಾಜ್ಯದಲ್ಲಿ ಬೀಫ್ ನಿಷೇಧವನ್ನು ವಿದೇಶಿಯರಿಗೆ ಸಡಿಲಿಕೆ ಮಾಡುವುದಾಗಿ ಮುಖ್ಯ ಮಂತ್ರಿ ಖಟ್ಟರ್ ಹೇಳಿರುವುದಾಗಿ ಹಿಂದೆ ವರದಿಯಾಗಿತ್ತು, ಕಳೆದ ವರ್ಷ ಅನಿಲ್ ವಿಜ್ ಅವರು ಗೋವನ್ನು ರಾಷ್ಟ್ರೀಯ ಪ್ರಾಣಿ ಎಂದು ಘೋಷಿಸಲು ಆನ್‌ಲೈನ್ ಮೂಲಕ ಅಭಿಯಾನ ಆರಂಭಿಸಿದ್ದರು.

ಕಳೆದ ವರ್ಷ ವಿಧಾನಸಭೆಯಲ್ಲಿ ಗೋವು ಸಂರಕ್ಷಣಾ ಮತ್ತು ಗೋವು ಸಂವರ್ಧನಾ ಮಸೂದೆಯನ್ನು ಅಂಗೀಕರಿಸಲಾಗಿತ್ತು. ಕಳೆದ ನವೆಂಬರ್‌ನಲ್ಲಿ ಗೋವುಗಳ ಸಾಗಾಟ, ಗೋಹತ್ಯೆ, ಮತ್ತು ಗೋಮಾಂಸ ತಿನ್ನುವುದು ನಿಷೇಧ ಕಾಯ್ದೆ ಜಾರಿಗೆ ಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News