ನನ್ನ ಮಾವನ ಹತ್ಯೆಯನ್ನು ಕಾಂಗ್ರೆಸ್ ಅಡಗಿಸಿಟ್ಟಿದೆ: ಲಾಲ್ ಬಹಾದೂರ್ ಶಾಸ್ತ್ರಿ ಸೊಸೆ

Update: 2016-02-10 08:46 GMT

ಲಕ್ನೋ: ನೇತಾಜಿ ಸುಭಾಶ್ಚಂದ್ರ ಬೋಸ್‌ರ ನಂತರ ಈಗ ಮಾಜಿ ಪ್ರಧಾನಿ ಲಾಲ್‌ಬಹಾದೂರ್ ಶಾಸ್ತ್ರಿಯ ಮೃತ್ಯವಿನ ಕಾರಣಗಳು ವಿವಾದಾಸ್ಪದವಾಗಿದೆ.

ಮಥುರಾದಲ್ಲಿ ಶಾಸ್ತ್ರಿಯವರ ಸೊಸೆ ನೀರಾ ಶಾಸ್ತ್ರಿ ಲಾಲ್‌ಬಹಾದೂರ್ ಶಾಸ್ತ್ರಿ ಅವರ ಸಾವಿನ ವಿಷಯವನ್ನು ಎತ್ತಿದ್ದಾರೆ. ನೀರಾ ಶಾಸ್ತ್ರಿಗಳ ಕೊನೆಯ ಮಗ ಅಶೋಕ್ ಶಾಸ್ತ್ರಿಯವರ ಪತ್ನಿಯಾಗಿದ್ದಾರೆ. ಅವರು ತನ್ನ ಮಾವನ ಹತ್ಯೆಯಾಗಿದೆ ಎಂದು ಆರೋಪಿಸುತ್ತಿದ್ದಾರೆ.

ಕಾಂಗ್ರೆಸ್ ಲಾಲ್ ಬಹಾದೂರ್ ಶಾಸ್ತ್ರಿಯವರ ಸಾವಿನ ಕಾರಣವನ್ನು ನಿಗೂಢವಾಗಿರಿಸಿದ್ದಕ್ಕೆ ಕಾಂಗ್ರೆಸ್ ಹೊಣೆಯೆಂದು ಹೇಳಿದ ಅವರು ಬಹುಶಃ ಶಾಸ್ತ್ರಿಯವರಿಗೆ ಹಾಲಿನಲ್ಲಿ ವಿಷಪ್ರಾಶನ ಮಾಡಲಾಗಿದೆ ಎಂದು ಹೇಳಿದ್ದಾರೆ. ಈ ಎಲ್ಲ ವಿಷಯವನ್ನು ಶಾಸ್ತ್ರಿ ತಮ್ಮ ಕನ್ನಡಕದ ಪೆಟ್ಟಿಗೆಯಲ್ಲಿ ಬರೆದಿಟ್ಟಿದ್ದರು.

ಆಗಿನ ಸರಕಾರ ವಿಷಯಗಳನ್ನು ಬಹಿರಂಗಪಡಿಸಲಿಲ್ಲ ಎಂದಿದ್ದಾರೆ. ಅಂತೂ ಶಾಸ್ತ್ರಿಯವರ ಶವವನ್ನು ಭಾರತದಲ್ಲಿ ಯಾಕೆ ಪೋಸ್ಟ್‌ಮಾರ್ಟಂ ನಡೆಸಿಲ್ಲ ಎಂದು ನೀರಾ ಕೇಳಿದ್ದಾರೆ. ನಿಧನಾನಂತರ ಅವರ ಶವ ನೀಲಿ ಬಣ್ಣಕ್ಕೆ ತಿರುಗಿತ್ತು. ಇದಕ್ಕೆ ಶೀಗಂಧ ಹಚ್ಚಿ ಜನರಿಂದ ಈ ಗುಟ್ಟನ್ನು ಅಡಗಿಸಿಡಲಾಯಿತು. ಅಂದಿನ ಕಾಂಗ್ರೆಸ್ ಸರಕಾರ ಅವರ ಮೃತ್ಯು ಹೇಗಾಯಿತು ಎಂದು ತಿಳಿಸಲು ವಿಫವಾಗಿತ್ತು.

ಇದೇ ವೇಳೆ ನೀರಾ ಪ್ರಧಾನಿಮೋದಿಯನ್ನು ಶ್ಲಾಘಿಸಿದ್ದಾರೆ. ದಿಲ್ಲಿಮುಖ್ಯಮಂತ್ರಿ ಕೇಜ್ರಿವಾಲ್‌ರನ್ನು ನೌಟಂಕಿ ಮಾಡುವಾತ ಎಂದು ಜರೆದಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News