ಆಂಡ್ರಾಯಡ್ ಬಳಕೆದಾರರಿಗೆ ವಾಟ್ಸ್ ಆಪ್ ನಿಂದ ಹೊಸ ಇಮೋಜಿಗಳು

Update: 2016-02-11 12:32 GMT

ಹೊಸದಿಲ್ಲಿ , ಫೆ. 10 : ವಿಶ್ವದ ಅತ್ಯಂತ ಹೆಚ್ಚು ಪ್ರಖ್ಯಾತ ಮೆಸ್ಸೇಜಿಂಗ್ ಸರ್ವಿಸ್ ವಾಟ್ಸ್ ಆಪ್ ಈಗ ತನ್ನ ಬಳಕೆದಾರರಿಗೆ ಹೊಸ ಇಮೋಜಿಗಳನ್ನು ಬಿಡುಗಡೆ ಮಾಡುತ್ತಿದೆ. ಈ ಹೊಸ ಇಮೊಜಿಗಳು ಆಂಡ್ರಾಯಡ್ ಬಳಕೆದಾರರ ವಾಟ್ಸ್ ಆಪ್ ನ  2.12.441 ವರ್ಶನ್ ನಲ್ಲಿ ಪ್ರಾರಂಭವಾಗಿವೆ. 
ಮೇಲೆ ಕೆಳಗಾಗಿರುವ ನಗುಮುಖ , ಕಣ್ಣುಗಳು ಇತ್ಯಾದಿ ಹಲವಾರು ಹೊಸ ಇಮೊಜಿಗಳು ಈ ಹೊಸ ಸರಣಿಯಲ್ಲಿ ಸೇರಿವೆ. ಇಬ್ಬರು ಮಹಿಳೆಯರು ಹಾಗು ಇಬ್ಬರು ಹುಡುಗರು , ಇಬ್ಬರು ಮಹಿಳೆಯರು ಹಾಗು ಇಬ್ಬರು ಹುಡುಗಿಯರು ಇರುವ ಕೌಟುಂಬಿಕ ಇಮೋಜಿಗಳೂ ಬಂದಿವೆ. ಈಗ ಫೇಸ್ ಬುಕ್ ಮಾಲಕತ್ವದಲ್ಲಿರುವ ವಾಟ್ಸ್ ಆಪ್ ಕಳೆದ ವರ್ಷ ಮಧ್ಯದ ಬೆರಳು ಮೇಲೆತ್ತಿದ ಹಾಗು ಇನ್ನೊಂದು ಇಮೋಜಿಯನ್ನೂ ಬಿಡುಗಡೆ ಮಾಡಿತ್ತು.


ಈಗ ವಾಟ್ಸ್ ಆಪ್ ಗೆ ಜಾಗತಿಕವಾಗಿ ಒಂದು ಬಿಲಿಯನ್ ಬಳಕೆದಾರರಿದ್ದಾರೆ. ಕಳೆದ 5 ತಿಂಗಳಲ್ಲಿ 100 ಮಿಲಿಯನ್ ಹೊಸ ಬಳಕೆದಾರರ ಸೇರ್ಪಡೆಯಿಂದ ಒಟ್ಟು ಒಂದು ಬಿಲಿಯನ್ ಬಳಕೆದಾರರು ನಮಗಿದ್ದಾರೆ ಎಂದು ವಾಟ್ಸ್ ಆಪ್ ಹೇಳಿದೆ. ಈಗ ಬಳಕೆದಾರರು ತಮ್ಮ " ಚಾಟ್ " ಗಳನ್ನು ಗೂಗಲ್ ಡ್ರೈವ್ ನಲ್ಲಿ ಇಟ್ಟುಕೊಳ್ಳುವ ಸೌಲಭ್ಯ ನೀಡಿದೆ. 
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News