ಗುಜರಾತ್ ನಲ್ಲಿ ರಸ್ತೆಯ ಝೀಬ್ರಾ ಲೈನ್, ಸ್ಪೀಡ್ ಬ್ರೇಕರ್ ಲೈನ್ ಕೇಸರಿ ಬಣ್ಣದಲ್ಲಿ!

Update: 2016-02-11 11:30 GMT

ವಿವಾದಾಸ್ಪದವಾದಾಗ ಕಣ್ತಪ್ಪು ಎಂದ ರಸ್ತೆ ನಿರ್ಮಾಣ ಸಮಿತಿ!

ಅಹ್ಮಾದಾಬಾದ್: ಗುಜರಾತ್‌ನ ಅಹ್ಮದಾಬಾದ್‌ನ ರಸ್ತೆಗಳಿಗೆ ಝೀಬ್ರಾ ಲೈನ್ ಮತ್ತು ಸ್ಪೀಡ್‌ಬ್ರೇಕರ್ ಬಂಪ್‌ಗಳಿಗೆ ಕೇಸರಿ ಬಣ್ಣ ಬಳಿದದ್ದು ವಿವಾದವಾಗಿದೆ. ಅಹ್ಮದಾಬಾದ್ ಮುನ್ಸಿಪಲ್ ಕಾರ್ಪೊರೇಶನ್ ಅಧೀನ ಇರುವ ರಸ್ತೆ ನಿರ್ಮಾಣ ಇಲಾಖೆ ಕಪ್ಪು ಬಣ್ಣವಿರುವ ರಸ್ತೆಗೆ ಬಳಿದಿರುವ ಕಾವಿ ಬಣ್ಣ ಸ್ಪಷ್ಟವಾಗಿ ಗೋಚರಿಸುತ್ತಿಲ್ಲ. ಇದು ಬೇಜವಾಬ್ದಾರಿ ವರ್ತನೆಯಾಗಿದೆಯೆಂದು ಗುಜರಾತ್‌ನ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

 ಕಪ್ಪು ಇರುವಲ್ಲಿ ಬಿಳಿ ಅಥವಾ ಹಳದಿ ಬಣ್ಣ ಎದ್ದು ಕಾಣುತ್ತವೆ. ಹಳದಿ ಬಣ್ಣ ಅಪಘಾತ ಸಾಧ್ಯತೆ ಸೂಚಕವಾಗಿದೆ. ಅಹ್ಮದಾಬಾದ್ ನಗರ ಪರಿಸರದ ಹೆಚ್ಚಿನೆಲ್ಲ ಸ್ಪೀಡ್‌ಬ್ರೇಕರ್‌ಗಳು ಹಾಗೂ ಝೀಬ್ರಾ ಲೈನ್‌ಗಳಿಗೆ ರಾತ್ರಿಯಲ್ಲೇ ಪೈಂಟು ಬಳಿದಾಗಿತ್ತು. ಟ್ರಾಫಿಕ್ ಮತ್ತು ಪೊಲೀಸರ ಅಜಾಗರೂಕತೆ ಇಂತಹ ಘಟನೆಯ ಹಿಂದಿದೆ ಎಂದು ಸಾರ್ವಜನಿಕರಿಂದ ವಿರೊಧ ವ್ಯಕ್ತವಾಗಿತ್ತು. ವಿಷಯ ವಿವಾದಕ್ಕೆ ತಿರುಗಿದಾಗ ರಾತ್ರಿವೇಳೆ ಹಚ್ಚಿದ ಬಣ್ಣ ಕಣ್ತಪ್ಪಿನಿಂದ ಬದಲಾಗಿಬಿಟ್ಟಿದೆ. ಕೂಡಲೇ ಕೇಸರಿಬಣ್ಣವನ್ನು ತೆಗೆಯ ಲಾಗುವುದು ಎಂದು ರೋಡ್ ಬಿಲ್ಡಿಂಗ್ ಕಮಿಟಿ ಅಧ್ಯಕ್ಷ ಜಿತಿನ್ ಪಟೇಲ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News