ಶೀಲಾ ದೀಕ್ಷಿತ್‌ರನ್ನು ಜೈಲಿಗೆ ಕಳುಹಿಸುವೆ: ಕೇಜ್ರಿವಾಲ್

Update: 2016-02-11 12:52 GMT

ಹೊಸದಿಲ್ಲಿ: ದಿಲ್ಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್‌ರ ಹೇಳಿಕೆಯೊಂದು ದಿಲ್ಲಿ ರಾಜಕೀಯ ವಾತಾವರಣದಲ್ಲಿ ಉದ್ರಿಕ್ತ ಸ್ಥಿತಿಯನ್ನು ಹುಟ್ಟುಹಾಕಿದೆ. ಕೇಜ್ರಿವಾಲ್‌ರು ದಿಲ್ಲಿಯ ಮಾಜಿ ಮುಖ್ಯಮಂತ್ರಿ ಶೀಲಾ ದೀಕ್ಷಿತ್‌ರ ಕುರಿತು ಮಾತಾಡುತ್ತಾ ಆ್ಯಂಟಿ ಕರೆಪ್ಷನ್ ಬ್ಯೂರೊ ನಿಯಂತ್ರಣವೇನಾದರೂ ತನ್ನ ವಶಕ್ಕೆ ಬಂದರೆ ಶೀಲಾದೀಕ್ಷಿತ್‌ರನ್ನು ಕೂಡಲೇ ಜೈಲಿಗೆ ಕಳುಹಿಸುವೆ ಎಂದು ಗುಡುಗಿದ್ದಾರೆ.

ಪಂಜಾಬ್‌ನ ಕುರಿತು ಪ್ರಶ್ನಿಸಿದಾಗ ಕೇಜ್ರಿವಾಲ್‌ರು ಪಂಜಾಬ್‌ನಲ್ಲಿ ಮುಖ್ಯಮಂತ್ರಿ ಆಗುವ ಕುರಿತು ಅಸ್ಪಷ್ಟವಾಗಿ ಉತ್ತರಿಸಿದ್ದಾರೆ. ಪಂಜಾಬ್ ಕಾಂಗ್ರೆಸ್ ಅಧ್ಯಕ್ಷ ಕ್ಯಾಪ್ಟನ್ ಅಮರಿಂದರ್ ಸಿಂಗ್‌ರ ವಿರೋಧದ ಕುರಿತು ಕೇಳಿದಾಗ ಕೇಜ್ರಿವಾಲ್ " ಅವರು ಹೇಳುತ್ತಾರೆ.ಹರಿಯಾಣದ ವ್ಯಕ್ತಿಗೆ ಇಲ್ಲಿಗೆ ಬರುತ್ತಿದ್ದಾನೆ ಎಂದು. ನಾನು ಪಾಕಿಸ್ತಾನದಿಂದ ಬಂದವನಲ್ಲ ಎನ್ನುತ್ತೇನೆ. ನಾನು ಭಾರತೀಯನಾಗಿರುವೆ. ಭಾರತದಲ್ಲಿ ಅಂತಹ ಯಾವ ಅಡ್ಡಿಯೂ ಇಲ್ಲ" ಎಂದು ಪ್ರತಿಕ್ರಿಯಿಸಿದ್ದಾರೆ. ರವಿವಾರ ದಿಲ್ಲಿಯ ಮುಖ್ಯಮಂತ್ರಿಯಾಗಿ ಒಂದು ವರ್ಷ ಪೂರ್ತಿಗೊಳಿಸಿದ ಕೇಜ್ರಿವಾಲ್ ಪಂಜಾಬ್ ಕಾಂಗ್ರೆಸ್ ಮತ್ತು ಅಕಾಲಿ ನಾಯಕರು ಪರಸ್ಪರ ಜೈಲಿಗೆ ಹೋಗುವುದರಿಂದ ರಕ್ಷಿಸಿಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ಮಾತ್ರವಲ್ಲ ಆ್ಯಂಟಿ ಕರೆಪ್ಷನ್ ಬ್ಯೂರೋ(ಎಸಿಬಿ) ಕೈಗೆ ಬಂದ ನಂತರ ಎಲ್ಲ ಭ್ರಷ್ಟಾಚಾರಗಳನ್ನು ಸಮಾಪ್ತಗೊಳಿಸುತ್ತೇನೆ ಎಂದೂ ಹೇಳಿದ್ದಾರೆ.

 ಶೀಲಾ ದೀಕ್ಷಿತ್‌ರ ವಿರುದ್ಧ ಎಲ್ಲ ಪುರಾವೆಗಳಿವೆ ಎಂದು ಹೇಳುತ್ತಿರುವ ನೀವು ಯಾಕೆ ಅವರನ್ನು ಜೈಲಿಗೆ ಕಳುಹಿಸಿಲ್ಲ ಎಂದು ಪ್ರಶ್ನಿಸಿದಾಗ ಅವರ ಸರಕಾರಕ್ಕೆ ಎಸಿಬಿಯ ಅಧಿಕಾರ ಸಿಕ್ಕರೆ ಕೂಡಲೇ ಈ ಕೆಲಸವನ್ನು ಮಾಡಿಸುತ್ತೇವೆ ಎಂದಿದ್ದಾರೆ. ಈಗ ಎಸಿಬಿಯ ಅಧಿಕಾರ ಕುರಿತು ವಿವಾದ ನ್ಯಾಯಾಲಯದಲ್ಲಿದೆ.

ತನ್ನ ಸರಕಾರಕ್ಕೆ ಒಂದು ವರ್ಷ ಪೂರ್ತಿಯಾಗಿರುವ ಹಿನ್ನೆಲೆಯಲ್ಲಿ ತನಗೆ ಹತ್ತರಲ್ಲಿ ಹತ್ತು ಮಾರ್ಕನ್ನು ನೀಡಿದ ಕೇಜ್ರಿವಾಲ್, ದಿಲ್ಲಿಸರಕಾರ ಜನರಿಗೆ ಉಚಿತ ನೀರು, ಅರ್ಧ ವಿದ್ಯುತ್ ಬಿಲ್ ಕೊಡುಗೆಯಿತ್ತದ್ದಲ್ಲದೆ ಖಜಾನೆಯ ಆದಾಯವನ್ನು ಕೂಡ ಹೆಚ್ಚಿಸಿದೆ ಎಂದು ಹೇಳಿದ್ದಾರೆ. ಫೆಬ್ರವರಿ ಹದಿನಾಲ್ಕರಂದು ದಿಲ್ಲಿ ಸರಕಾರಕ್ಕೆ ಒಂದು ವರ್ಷ ಪೂರ್ತಿಯಾಗಲಿದ್ದು ಎಲ್ಲ ಮಂತ್ರಿಗಳು ಅಂದು ಜನರೊಂದಿಗೆ ಫೋನ್‌ನಲ್ಲಿ ಸಂವಾದ ನಡೆಸಲಿದ್ದಾರೆಂದು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News