ವಲಸಿಗರನ್ನು ಹೊರಕಳುಹಿಸುವೆ: ಟರ್ಕಿ ಎಚ್ಚರಿಕೆ
Update: 2016-02-11 20:42 IST
ಅಂಕಾರ (ಟರ್ಕಿ), ಫೆ. 11: ಇನ್ನಷ್ಟು ನಿರಾಶ್ರಿತರಿಗೆ ಟರ್ಕಿಯ ಗಡಿಯನ್ನು ತೆರೆಯುವಂತೆ ಒತ್ತಡ ಹೇರುತ್ತಿರುವುದಕ್ಕಾಗಿ ಐರೋಪ್ಯ ಒಕ್ಕೂಟ ಮತ್ತು ವಿಶ್ವಸಂಸ್ಥೆಗಳನ್ನು ಟರ್ಕಿ ಅಧ್ಯಕ್ಷ ರಿಸೆಪ್ ತಯ್ಯಿಪ್ ಎರ್ದೊಗಾನ್ ಟೀಕಿಸಿದ್ದಾರೆ.
ಅದೇ ವೇಳೆ, ಈಗಾಗಲೇ ದೇಶದಲ್ಲಿರುವ ಲಕ್ಷಾಂತರ ನಿರಾಶ್ರಿತರನ್ನು ಇತರ ದೇಶಗಳಿಗೆ ಕಳುಹಿಸುವುದಾಗಿ ಅವರು ಎಚ್ಚರಿಸಿದ್ದಾರೆ.
‘‘ನಾವು ನಮ್ಮ ಹಣೆಗಳಲ್ಲಿ ‘ಮೂರ್ಖರು’ ಎಂದು ಬರೆದುಕೊಂಡಿಲ್ಲ. ವಿಮಾನಗಳು ಮತ್ತು ಬಸ್‌ಗಳು ಇರುವುದು ಸುಮ್ಮನೆ ಎಂದು ನಾವು ತಿಳಿದುಕೊಂಡಿಲ್ಲ. ಅಗತ್ಯವಿರುವುದನ್ನು ನಾವು ಮಾಡುತ್ತೇವೆ’’ ಎಂದು ಅಂಕಾರದಲ್ಲಿ ನಡೆದ ವ್ಯಾಪಾರ ಸಮ್ಮೇಳನವೊಂದರಲ್ಲಿ ಎರ್ದೊಗಾನ್ ಹೇಳಿದರು.