ಪ್ರವಾದಿ ಚರ್ಯೆಯ ಉಳಿವಿಗೆ ಸಮಸ್ತದ ಕೊಡುಗೆ ಅಪಾರ: ಬಹರೈನ್ ಚೀಫ್ ಜಸ್ಟೀಸ್

Update: 2016-02-11 18:32 GMT

ಆಲಪ್ಪುಝ, ಫೆ.11: ಪ್ರವಾದಿಯವರ ಆದರ್ಶದಡಿ ದಕ್ಷಿಣ ಭಾರತದಲ್ಲಿ ಇಸ್ಲಾಮಿನ ಪಾರಂಪರ್ಯವನ್ನು ಉಳಿಸಿಕೊಂಡು ಬರುವಲ್ಲಿ ಸಮಸ್ತದ ಕೊಡುಗೆ ಅಪಾರ ಎಂದು ಬಹರೈನ್ ಚೀಫ್ ಜಸ್ಟೀಸ್ ಶೈಖ್ ಹಮದ್ ಬಿನ್ ಸಾಮಿ ಅಲ್ ದಸೂರಿ ಹೇಳಿದರು.

‘ಆದರ್ಶ ಪರಿಶುದ್ಧತೆಯ 90 ವರ್ಷ’ ಎಂಬ ಧ್ಯೇಯವಾಕ್ಯ ದೊಂದಿಗೆ ಆಲಪ್ಪುಝದಲ್ಲಿ ನಡೆಯುತ್ತಿರುವ ಸಮಸ್ತ ಕೇರಳ ಜಂಇಯ್ಯತುಲ್ ಉಲಮಾದ 90ನೆ ವಾರ್ಷಿಕೋತ್ಸವ ಸಮ್ಮೇಳನವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಸಮಸ್ತ ಉಪಾಧ್ಯಕ್ಷ ಎಂ.ಟಿ ಅಬ್ದುಲ್ಲಾ ಮುಸ್ಲಿಯಾರ್ ಅಧ್ಯಕ್ಷತೆ ವಹಿಸಿದ್ದರು. ಖ್ಯಾತ ವಾಗ್ಮಿ ಅಹ್ಮದ್ ಕಬೀರ್ ಬಾಖವಿ ಮುಖ್ಯ ಭಾಷಣ ನಡೆಸಿದರು.

ಪಾಣಕ್ಕಾಡ್ ಅಬ್ಬಾಸಲಿ ಶಿಹಾಬ್ ತಂಙಳ್, ಸೈಯದ್ ಹಮೀದಲಿ ಶಿಹಾಬ್ ತಂಙಳ್, ಶಾಸಕ ಸಿ.ಮೋಹಿನ್ ಕುಟ್ಟಿ, ಪಿ.ಕೆ. ಇಬ್ರಾಹೀಂ ಕುಟ್ಟಿ ಮೌಲವಿ ಕೊಲ್ಲಂ, ಶಹೀದ್ ಮುಸ್ಲಿಯಾರ್, ಶಾಸಕ ಫೈಝಲ್ ಶಂಸುದ್ದೀನ್, ಪಿ.ಟಿ. ಅಬ್ದುರ್ರಹ್ಮಾನ್ ಅಬುದಾಬಿ, ಕಾಞಂಗಾಡ್ ಸಂಯುಕ್ತ ಜಮಾಅತ್ ಅಧ್ಯಕ್ಷ ಮೆಟ್ರೋ ಹಾಜಿ, ಸಮಸ್ತದ ಜೊತೆ ಕಾರ್ಯದರ್ಶಿ ಕೋಟುಮಲ ಬಾಪು ಮುಸ್ಲಿಯಾರ್, ಪ್ರೊ.ಅಲಿಕುಟ್ಟಿ ಮುಸ್ಲಿಯಾರ್ ಹಾಗೂ ಮತ್ತಿತರ ಗಣ್ಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಸಮ್ಮೇಳನದ ಅಂಗವಾಗಿ ಹೊರತಂದ ಸಮಸ್ತ ವಿಶೇಷ ಸಂಚಿಕೆಯನ್ನು ಹಿರಿಯ ವಿದ್ವಾಂಸ ಶೈಖ್ ಅಬ್ದುಲ್ ಕಾದಿರಿ ಜೀಲಾನಿ ಬಿಡುಗಡೆಗೊಳಿಸಿದರು.

ಕಾರ್ಯಕ್ರಮದಲ್ಲಿ ಕಾರ್ಯಕ್ರಮಕ್ಕೂ ಮೊದಲು ಸಮಸ್ತ ಕೇರಳ ಜಂಇಯ್ಯತುಲ್ ಉಲಮಾದ ಕೋಶಾಧಿಕಾರಿ ಸೈಯದ್ ಮುಹಮ್ಮದ್ ಜಿಫ್ರಿ ಮುತ್ತುಕೋಯ ತಂಙಳ್ ಧ್ವಜಾರೋ ಹಣಗೈದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News