ಉಡುಪಿ: ಜಿಪಂಗೆ 77, ತಾಪಂಗೆ 233 ಸ್ಪರ್ಧಿಗಳು ಕಣದಲ್ಲಿ

Update: 2016-02-11 18:52 GMT

 ಉಡುಪಿ, ಫೆ.11: ಜಿಲ್ಲೆಯಲ್ಲಿ ಮುಂಬರುವ ಜಿಪಂ ಮತ್ತು ತಾಪಂ ಚುನಾವಣೆಯ ಸ್ಪರ್ಧಾ ಕಣದ ಸ್ಪಷ್ಟ ಚಿತ್ರಣ ಇಂದು ಮೂಡಿ ಬಂದಿದ್ದು, ಜಿಪಂಗಾಗಿ 26 ಸ್ಥಾನಗಳಲ್ಲಿ ಒಟ್ಟು 77 ಮಂದಿ ಹಾಗೂ ಮೂರು ತಾಪಂಗಾಗಿ ಒಟ್ಟು 98 ಸ್ಥಾನಗಳಲ್ಲಿ 233 ಮಂದಿ ಸ್ಪರ್ಧಿಸುತಿದ್ದಾರೆ.
ನಾಮಪತ್ರ ಹಿಂದೆಗೆ ದುಕೊಳ್ಳಲು ಗುರುವಾರ ಕೊನೆಯ ದಿನವಾಗಿತ್ತು. ಜಿಪಂನ ಒಟ್ಟು 26 ಸ್ಥಾನಗಳಿಗೆ ಕಾಂಗ್ರೆಸ್ ಪಕ್ಷದಿಂದ 26 ಮಂದಿ, ಬಿಜೆಪಿಯಿಂದ 26 ಮಂದಿ, ಜಾತ್ಯತೀತ ಜನತಾ ದಳದಿಂದ 6, ಬಿಎಸ್ಪಿಯಿಂದ 4, ಸಿಪಿಎಂನಿಂದ 4 ಹಾಗೂ ಪಕ್ಷೇತರರು 11 ಮಂದಿ ಅಂತಿಮವಾಗಿ ಸ್ಪರ್ಧಾಕಣದಲ್ಲಿ ಉಳಿದು ಕೊಂಡಿದ್ದಾರೆ.
 ತಾಲೂಕುವಾರು ಹೇಳುವುದಾದರೆ ಉಡುಪಿ ತಾಲೂಕಿನ 11 ಜಿಪಂ ಸ್ಥಾನಗಳಿಗೆ 25 ಮಂದಿ, ಕುಂದಾಪುರ ತಾಲೂಕಿನ 11 ಸ್ಥಾನಗಳಿಗೆ 29 ಮಂದಿ ಹಾಗೂ ಕಾರ್ಕಳ ತಾಲೂಕಿನ 5 ಸ್ಥಾನಗಳಿಗೆ 13 ಮಂದಿ ಸ್ಪರ್ಧೆಯಲ್ಲಿದ್ದಾರೆ. ಬೈಂದೂರಿನ ಶಿರೂರು ಕ್ಷೇತ್ರದಲ್ಲಿ ಅತ್ಯಧಿಕ ಆರು ಮಂದಿ ಸ್ಪರ್ಧಾಕಣದಲ್ಲಿ ಉಳಿದುಕೊಂಡಿದ್ದಾರೆ.
ಇನ್ನು ತಾಪಂನಲ್ಲಿ ಒಟ್ಟು 98 ಸ್ಥಾನಗಳಿದ್ದು, ಕಾಂಗ್ರೆಸ್ ಮತ್ತು ಬಿಜೆಪಿ ಎಲ್ಲ 98 ಸ್ಥಾನಗಳಲ್ಲಿ ಮುಖಾಮುಖಿಯಾದರೆ, 10ರಲ್ಲಿ ಜನತಾದಳ, 12ರಲ್ಲಿ ಸಿಪಿಎಂ, 1ರಲ್ಲಿ ಎಸ್‌ಡಿಪಿಐ ಹಾಗೂ 14 ಕ್ಷೇತ್ರಗಳಲ್ಲಿ ಪಕ್ಷೇತರರು ಸ್ಪರ್ಧೆ ನೀಡುತ್ತಿದ್ದಾರೆ. ಉಡುಪಿ ತಾಪಂನ 41 ಸ್ಥಾನಗಳಿಗೆ 93 ಮಂದಿ ಅಭ್ಯರ್ಥಿಗಳು ಸ್ಪರ್ಧಾಕಣ ದಲ್ಲಿದ್ದಾರೆ. ಕುಂದಾಪುರ ತಾಪಂನ 37 ಸ್ಥಾನಗಳಿಗೆ ಅಂತಿಮ ವಾಗಿ 99 ಮಂದಿ ಸ್ಪರ್ಧಾಕಣದಲ್ಲಿ ಉಳಿದಿದ್ದಾರೆ. ಕಾರ್ಕಳ ತಾಲೂಕಿನ 20 ಸ್ಥಾನಗಳಿಗೆ 41 ಮಂದಿ ಸ್ಪರ್ಧಿಸುತ್ತಿದ್ದಾರೆ. ಕಾರ್ಕಳದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ನೇರ ಮುಖಾಮುಖಿ ನಡೆ ಯುತ್ತಿದೆ. ಒಂದು ಕ್ಷೇತ್ರದಲ್ಲಿ ಮಾತ್ರ ಪಕ್ಷೇತರ ಅಭ್ಯರ್ಥಿ ಇದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News