×
Ad

ತಾಯ್ನಾಡಿನ ವಿರುದ್ಧ ಅವಮಾನವನ್ನು ಸಹಿಸೆವು : ಸ್ಮೃತಿ ಇರಾನಿ

Update: 2016-02-12 14:58 IST

ಹೊಸದಿಲ್ಲಿ , ಫೆ. 12 : ಜವಾಹರ ಲಾಲ್ ನೆಹರೂ ವಿವಿಯಲ್ಲಿ ನಡೆದ ಅಫ಼್ಝಲ್ ಗುರು ಗಲ್ಲಿನ ವಿರುದ್ಧದ ಪ್ರತಿಭಟನೆ ಈಗ ಗಂಭೀರ ಸ್ವರೂಪ ಪಡೆದಿದೆ.

ಗೃಹ ಸಚಿವ ರಾಜ್ ನಾಥ್ ಸಿಂಗ್ " ಕಠಿಣ ಕ್ರಮ" ದ ಎಚ್ಚರಿಕೆ ನೀಡಿ ಸೂಕ್ತ ಕ್ರಮ ಕೈಗೊಳ್ಳಲು ಪೊಲೀಸರಿಗೆ ನಿರ್ದೇಶನ ನೀಡಿದ ಬೆನ್ನಲ್ಲೇ ಮಾನವ ಸಂಪನ್ಮೂಲ ಸಚಿವೆ ಸ್ಮೃತಿ ಇರಾನಿ " ತಾಯ್ನಾಡಿನ ವಿರುದ್ಧದ ಅವಮಾನವನ್ನು ದೇಶ ಯಾವತ್ತೂ ಸಹಿಸದು " ಎಂದು ಗುಡುಗಿದ್ದಾರೆ. 


ಈಗಾಗಲೇ ಪೊಲೀಸರು ವಿದ್ಯಾರ್ಥಿ ಯೂನಿಯನ್ ನಾಯಕನೊಬ್ಬನನ್ನು ವಿಚಾರಣೆಗೆ ಕರೆದೊಯ್ದಿದ್ದು , ಪ್ರತಿಭಟನೆಯಲ್ಲಿ ಭಾಗವಹಿಸಿದ್ದರೆನ್ನಲಾದ ಇತರ ವಿದ್ಯಾರ್ಥಿಗಳಿಗಾಗಿ ಪೊಲೀಸರು ಕ್ಯಾಂಪಸ್ ನಲ್ಲಿ ಶೋಧ ನಡೆಸುತ್ತಿದ್ದಾರೆ. ಗುರುವಾರ ಪೊಲೀಸರು ದೇಶದ್ರೋಹ ಹಾಗು ಕ್ರಿಮಿನಲ್ ಸಂಚಿನ ದೂರು ದಾಖಲಿಸಿದ್ದರು. 
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News