×
Ad

ಅತ್ಯಾಚಾರ ಸಾಕ್ಷ್ಯ ಬದಲಿಸಲು ಹನ್ನೆರಡು ವರ್ಷದ ಬಾಲಕಿಗೆ 50 ಲಕ್ಷ ಕೊಡುಗೆ ಮುಂದಿಟ್ಟ ಭೂಪ!

Update: 2016-02-12 17:03 IST

ಕೊಚ್ಚಿ: ಏಳನೆ ತರಗತಿಯ ವಿದ್ಯಾರ್ಥಿನಿಗೆ ಲೈಂಗಿಕ ದೌರ್ಜನ್ಯ ವೆಸಗಿದ ಸಾಕ್ಷ್ಯ ಬದಲಿಸಿ ಹೇಳಲಿಕ್ಕಾಗಿ ಆರೋಪಿಯೊಬ್ಬ ಸಂತ್ರಸ್ತ ಬಾಲಕಿಗೆ 50 ಲಕ್ಷ ರೂ. ಕೊಡುಗೆ ಮುಂದಿಟ್ಟ ಘಟನೆ ಕೇರಳದಿಂದ ವರದಿಯಾಗಿದೆ. ಕಲೂರ್ ಇಂಟರ್ ನ್ಯಾಶನಲ್ ಸ್ಟುಡಿಯೊದ ಹಿಂಬದಿಯಲ್ಲಿ ವಾಸಿಸುವ ಶಾಜಿ(45) ಎಂಬಾತ ಏಳನೆ ಕ್ಲಾಸ್‌ನ ಬಾಲಕಿ ಮೇಲೆಲೈಂಗಿಕ ದೌರ್ಜನ್ಯವೆಸಗಿದ್ದ.

ಇದು ಬಹಿರಂಗಗೊಳ್ಳುತ್ತಿದ್ದಂತೆ ಆತ ವಿದೇಶಕ್ಕೆ ಹಾರಿದ್ದಾನೆನ್ನಲಾಗುತ್ತಿದೆ. ಕಳೆದ ಡಿಸೆಂಬರ್ ಏಳನೆ ತಾರೀಕು ಪಾಲರಿವಟ್ಟಂ ಸ್ಟೇಶನ್‌ನಲ್ಲಿ ಲೈಂಗಿಕ ದೌರ್ಜನ್ಯ ಕೇಸು ದಾಖಲಿಸಲಾಗಿತ್ತು. ಕೇಸು ದಾಖಲುಗೊಂಡು ಮೂರು ತಿಂಗಳು ಕಳೆದಿದ್ದರೂ ಆರೋಪಿಯನ್ನು ಬಂಧಿಸಲು ಪೊಲೀಸರಿಗೆ ಸಾಧ್ಯವಾಗಿಲ್ಲ. ಶಾಜಿಯ ಹೆಸರಿನಲ್ಲಿ ಲುಕೌಟ್ ನೊಟೀಸ್ ಹೊರಡಿಸಲಾಗಿದೆ.

ಶಾಜಿ ವಾಸಿಸುತ್ತಿದ್ದ ಕಡವತ್ರದ ಪ್ಲ್ಯಾಟ್‌ಗೆ ಸಮೀಪವಿರುವ ಪ್ಲ್ಯಾಟ್‌ನಲ್ಲಿ ವಾಸಿಸುತ್ತಿರುವ ಐಪಿಎಸ್ ಮಹಿಳಾ ಅಧಿಕಾರಿಯೊಂದಿಗೆ ಶಾಜಿಗೆ ಸಂಬಂಧವಿದ್ದು ಕೇಸು ತನಿಖೆ ಇಷ್ಟು ವಿಳಂಬವಾಗಲು ಕಾರಣವಾಗಿದೆ ಎಂದು ಆರೋಪಿಸಲಾಗುತ್ತಿದೆ. ಶಾಜಿಯ ಈ ಪ್ಲ್ಯಾಟ್‌ನಲ್ಲಿ ಬಾಲಕಿ ಮೇಲೆ ಅನೇಕ ಬಾರಿ ಆತ ಲೈಂಗಿಕ ದೌರ್ಜನ್ಯ ನಡೆಸಿದ್ದ.ಸ್ವಂತ ಲೇಡಿಸ್ ಹಾಸ್ಟೆಲ್ ಮತ್ತು ರಿಯಲ್ ಎಸ್ಟೇಟ್‌ನ್ನು ಹೊಂದಿರುವ ಆತನ ವಿರುದ್ಧ ವಿವಿಧ ಪೊಲೀಸ್ ಸ್ಟೇಶನ್‌ಗಳಲ್ಲಿ ಬೇರೆಬೇರೆ ಪ್ರಕರಣಗಳು ದಾಖಲಾಗಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News