×
Ad

ಒಂದು ರೂಪಾಯಿ ಸಂಬಳ ಸ್ವೀಕರಿಸುತ್ತಿದ್ದ ಮುಂಬೈ ಪೊಲೀಸ್ ಕಮಿಷನರ್ ಅಹ್ಮದ್ ಜಾವೇದ್

Update: 2016-02-12 21:32 IST

ಮುಂಬೈ, ಫೆ. 12 : ಇತ್ತೀಚಿಗಷ್ಟೇ ಮುಂಬೈ ಪೊಲೀಸ್ ಕಮಿಷನರ್ ಹುದ್ದೆಯಿಂದ ನಿವೃತ್ತರಾಗಿ ಶೀಘ್ರವೇ ಸೌದಿ ಅರೇಬಿಯಾದಲ್ಲಿ ಭಾರತದ ರಾಯಭಾರಿಯಾಗಿ ಅಧಿಕಾರ ಸ್ವೀಕರಿಸಲಿರುವ ಅಹ್ಮದ್ ಜಾವೇದ್ ಅವರ ಕುರಿತ ಅಪರೂಪದ ವಿಷಯವೊಂದನ್ನು ಮಾಧ್ಯಮಗಳು ವರದಿಯಾಗಿವೆ. ಅಹ್ಮದ್ ಜಾವೇದ್ ಅವರು ಕರ್ತವ್ಯದಲ್ಲಿದ್ದಾಗ ಪ್ರತಿ ತಿಂಗಳು ಕೇವಲ್ ಒಂದು ರೂಪಾಯಿಯನ್ನು ಮಾತ್ರ ಸಂಬಳವಾಗಿ ಸ್ವೀಕರಿಸುತ್ತಿದ್ದರು. ಉಳಿದ ಮೊತ್ತವನ್ನು ನೇರವಾಗಿ ಪೊಲೀಸ್ ನಿಧಿಗೆ ನೀಡುತ್ತಿದ್ದರು ಎಂಬುದು ಹೆಚ್ಚಿನವರಿಗೆ ತಿಳಿದಿರಲಿಲ್ಲ. 
ಉತ್ತರ ಪ್ರದೇಶದವರಾದ ಜಾವೇದ್ ಅಲ್ಲಿನ ಒಂದು ಆಗರ್ಭ ಶ್ರೀಮಂತ ಮನೆತನದವರು. ದೆಹಲಿಯ ಪ್ರತಿಷ್ಠಿತ ಸೈಂಟ್ ಸ್ಟೀಫ಼ನ್ಸ್ ಕಾಲೇಜಿನಲ್ಲಿ ಬಿ ಎ ಪದವಿ ಪಡೆದ ಬಳಿಕ ಅವರು ಐಪಿಎಸ್ ಎಧಿಕಾರಿಯಾಗಿ ಯುಪಿಎಸ್ಸಿ ಪರೀಕ್ಷೆಯಲ್ಲಿ ಆಯ್ಕೆಯಾಗಿದ್ದರು. ಮುಂಬೈ ಹಾಗು ದೆಹಲಿಯಲ್ಲಿ ವಿವಿಧ ಹುದ್ದೆಗಳಲ್ಲಿ ಕಾರ್ಯ ನಿರ್ವಹಿಸಿದ ಬಳಿಕ ಅವರು ಮುಂಬೈ ಪೊಲೀಸ್ ಕಮಿಷನರ್ ಹುದ್ದೆ ಅಲಂಕರಿಸಿದ್ದರು. ಪ್ರತಿದಿನ ಖಾದಿ ಬಟ್ಟೆಯ ಖಾಕಿ ಸಮವಸ್ತ್ರ ಹಾಕುವುದು ಅವರ ವಿಶೇಷತೆಯಾಗಿತ್ತು. ಪೊಲೀಸ್ ವಾಹನವನ್ನು ತನ್ನ ವ್ಯಾಪ್ತಿಯಲ್ಲಿ ಮಾತ್ರ ಬಳಸಿ ಅಲ್ಲಿಂದ ಹೊರಗೆ ಹೊಗಳಿದ್ದಾರೆ ತನ್ನ ಖಾಸಗಿ ವಾಹನ ಬಳಸುವುದು ಅವರಿಗೆ ಅವರೇ ಹಾಕಿಕೊಂಡ ನಿಯಮವಾಗಿತ್ತು. ಉದ್ಯಮಿಗಳಿಂದ ಯಾವುದೇ ರೀತಿಯ ಉಡುಗೊರೆಗಳನ್ನು ಅವರು ಸ್ವೀಕರಿಸುತ್ತಿರಲಿಲ್ಲ. 
ಉತ್ತಮ ಹಾಗು ವಿಲಾಸಿ ಜೀವನ ಶೈಲಿ ಅವರದಾಗಿತ್ತು. ಈಗ ಅದಕ್ಕೆ ತಕ್ಕಂತೆ ದೊಡ್ಡ ದೇಶದ ರಾಯಭಾರಿಯಾಗಿ ಆಯ್ಕೆಯಾಗಿದ್ದಾರೆ. ಈ ಹಿಂದೆ ಮುಂಬೈ ಪೊಲೀಸ್ ಕಮಿಷನರ್ ಆಗಿದ್ದ ಜುಲಿಯೋ ರಿಬೇರೋ ರೊಮಾನಿಯ ದೇಶದ ರಾಯಭಾರಿಯಾಗಿದ್ದರು. 


 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News