ಮಂಗಳೂರಿನಲ್ಲಿ 64ನೆ ರಾಷ್ಟ್ರೀಯ ದೇಹದಾರ್ಢ್ಯ ಸ್ಪರ್ಧೆ,ಕರ್ನಾಟಕದ ಕೆ.ಶ್ರೀನಿವಾಸನ್‌ಗೆ ‘ಭಾರತ್ ಕಿಶೋರ್’ ಪ್ರಶಸ್ತಿ

Update: 2016-02-13 17:31 GMT

ಮಂಗಳೂರಿನಲ್ಲಿ 64ನೆ ರಾಷ್ಟ್ರೀಯ ದೇಹದಾರ್ಢ್ಯ ಸ್ಪರ್ಧೆಕರ್ನಾಟಕದ ಕೆ.ಶ್ರೀನಿವಾಸನ್‌ಗೆ ‘ಭಾರತ್ ಉದಯ್’ಪ.ಬಂ.ದ ಬಿಸ್ವಾಪ್ರಿಯೊಗೆ ‘ಭಾರತ್ ಕಿಶೋರ್’ ಪ್ರಶಸ್ತಿಮಂಗಳೂರು, ಫೆ.13: ನಗರದ ನೆಹರೂ ಮೈದಾನದಲ್ಲಿ ಸೌತ್ ಕೆನರಾ ಅಮೆಚೂರ್ ಬಾಡಿ ಬಿಲ್ಡರ್ಸ್‌ ಅಸೋಸಿಯೇಶನ್ ವತಿಯಿಂದ ನಡೆದ 64ನೆ ರಾಷ್ಟ್ರೀಯ ದೇಹದಾರ್ಢ್ಯ ಸ್ಪರ್ಧೆ-2016ರ ಭಾರತ ಉದಯ್ ಪ್ರಶಸ್ತಿಯನ್ನು ಕರ್ನಾಟಕ ಕೆ.ಶ್ರೀನಿವಾಸನ್ ಹಾಗೂ ಭಾರತ್ ಕಿಶೋರ್ ಪ್ರಶಸ್ತಿಯನ್ನು ಪಶ್ಚಿಮ ಬಂಗಾಲದ ಬಿಸ್ವಾ ಪ್ರಿಯೊ ಕುಂಡು ಪಡೆದಿದ್ದಾರೆ.

ಭಾರತ್ ಉದಯ್ ವಿಭಾಗದಲ್ಲಿ ಅತ್ಯುತ್ತಮ ದೇಹದಾರ್ಢ್ಯ ಪಟುವಾಗಿ ಪಶ್ಚಿಮಬಂಗಾಲದ ಬಿಸ್ವಜಿತ್ ಬಿಸ್ವಾಸ್ ಹಾಗೂ , ಭಾರತ್ ಕಿಶೋರ್ ವಿಭಾಗದ ಅತ್ಯುತ್ತಮ ದೇಹದಾರ್ಢ್ಯ ಪಟುವಾಗಿ ಕರ್ನಾಟಕದ ವಿನಯ ಕೆ.ಎಸ್. ಮೂಡಿಬಂದಿದ್ದಾರೆ.ಭಾರತ್ ಉದಯ್ ವಿಭಾಗಭಾರತ್ ಉದಯ್ ವಿಭಾಗದ ಗ್ರೂಪ್ 1ರಲ್ಲಿ ಪಶ್ಚಿಮ ಬಂಗಾಲದ ಬಿಸ್ವಜಿತ್ ಬಿಸ್ವಾಸ್ ಪ್ರಥಮ ಸ್ಥಾನ ಹಾಗೂ ದ್ವಿತೀಯ ಸ್ಥಾನವನ್ನು ಕರ್ನಾಟಕದ ಅಕ್ಮಲ್ ಪಾಶ ಪಡೆದಿದ್ದಾರೆ. ಗ್ರೂಪ್ 2ರಲ್ಲಿ ಪ್ರಥಮ-ಯೋಗೇಶ್ ಗುರುನಾಥ್ ಗವಂಡ್ ಮಹಾರಾಷ್ಟ್ರ. ದ್ವಿತೀಯ-ಪಿಎಸ್‌ಎಸ್‌ವಿ ರತ್ನಂ ಆಂಧ್ರ ಪ್ರದೇಶ. ಗ್ರೂಪ್ 3ರಲ್ಲಿ ಪ್ರಥಮ-ಕೆ.ಶ್ರೀನಿವಾಸನ್ ಕರ್ನಾಟಕ. ದ್ವಿತೀಯ-ವರುಣ್ ಪದ್ಬನಾಬನ್ ಶೆಟ್ಟಿ ಮಹಾರಾಷ್ಟ್ರ. ಗ್ರೂಪ್ 4ರಲ್ಲಿ ಪ್ರಥಮ-ಹುಮೇರ್ ರಿಝ್ವಿನ್ ಮಿರ್ಝಾ ಮಹಾರಾಷ್ಟ್ರ. ದ್ವಿತೀಯ-ಮನ್ಸೂರ್ ಗಫ್ಫಾರ್ ಮುಕದಂ ಮಹಾರಾಷ್ಟ್ರ.

ಭಾರತ್ ಕಿಶೋರ್ ವಿಭಾಗಈ ವಿಭಾಗದ ಗ್ರೂಪ್ 1ರಲ್ಲಿ ಪ್ರಥಮ-ನಿಖಿಲ್ ಕೃಷ್ಣ ಉತೇಕಾರ್ ಮಹಾರಾಷ್ಟ್ರ. ದ್ವಿತೀಯ-ಪ್ರವೀಣ್ ಎನ್.ಕರ್ನಾಟಕ. ಗ್ರೂಪ್ 2ರಲ್ಲಿ ಪ್ರಥಮ-ಚಂದನ್ ಎಂ.ಬಿ. ಕರ್ನಾಟಕ. ದ್ವಿತೀಯ-ಪ್ರದೀಪ್ ಮಿನಿನಾಥ್ ಪೋಪಾಲ್‌ಘಾಟ್ ಮಹಾರಾಷ್ಟ್ರ. ಗ್ರೂಪ್ 3ರಲ್ಲಿ ಪ್ರಥಮ-ವಿನಯ್ ಕೆ.ಎಸ್. ಕರ್ನಾಟಕ. ದ್ವಿತೀಯ-ಫಝಾನ್ ಉತ್ತರಪ್ರದೇಶ. ಗ್ರೂಪ್ 4ರಲ್ಲಿ ಪ್ರಥಮ-ಬಿಸ್ವಾಪ್ರಿಯೊ ಕುಂಡು ಪಶ್ಚಿಮ ಬಂಗಾಲ. ದ್ವಿತೀಯ-ಮಹೇಂದ್ರ ಕುಮಾರ್ ಕರ್ನಾಟಕ.

ಅಂಕುಶ್ ಶಿವರಾಂಗೆ ‘ಭಾರತ್ ಕೇಸರಿ’ ಪ್ರಶಸ್ತಿ
ಮಹಾರಾಷ್ಟ್ರದ ಅಂಕುಶ್ ಶಿವರಾಂ ತೆರ್ವಾಂಕರ್ ಅವರಿಗೆ 40 ವರ್ಷ ಮೇಲ್ಪಟ್ಟ ವಿಭಾಗದಲ್ಲಿ ನಡೆದ ಸ್ಪರ್ಧೆಯಲ್ಲಿ ಭಾರತ್ ಕೇಸರಿ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ.
40 ವರ್ಷ ಮೇಲಿನ ಭಾರತ್ ಕೇಸರಿ ವಿಭಾಗದ ಗ್ರೂಪ್ 1ರಲ್ಲಿ ಪ್ರಥಮ-ಅಶೋಕ್ ದೇವ್‌ಜಿ ಫಡಕ್ಲೆ ಮಹಾರಾಷ್ಟ್ರ. ದ್ವಿತೀಯ-ಸೆಬಾಸ್ಟಿನ್ ಗೋನ್ಸಾಲ್ವ್ಸ್ ಮಹಾರಹಾಷ್ಟ್ರ. ಗ್ರೂಪ್ 2ರಲ್ಲಿ ಪ್ರಥಮ-ಶಾಜು ವಿ.ಡಿ. ಕರ್ನಾಟಕ. ದ್ವಿತೀಯ-ಕಿರಣ್ ಸೂರ್ಯಕಾಂತ್ ರಾಜ್‌ಪೂತ್ ಮಹಾರಾಷ್ಟ್ರ. ಗ್ರೂಪ್ 3ರಲ್ಲಿ ಪ್ರಥಮ- ಅಂಕುಶ್ ಶಿವರಾಂ ತೆರ್ವಾಂಕರ್ ಮಹಾರಾಷ್ಟ್ರ. ದ್ವಿತೀಯ-ಗೋಪಿ ರೆಡ್ಡಿ ಮಹಾರಾಷ್ಟ್ರ. ಗ್ರೂಪ್ 4ರಲ್ಲಿ ಪ್ರಥಮ-ಅಲೆಕ್ಸ್ ಕುರಿಯನ್ ಕರ್ನಾಟಕ. ದ್ವಿತೀಯ-ಹರ್ವಿಂದರ್ ವಾಲಿಯಾ ಮಹಾರಾಷ್ಟ್ರ.
ಇದೇ ವಿಭಾಗದ 50 ವರ್ಷ ಮೇಲ್ಪಟ್ಟ ವಿಭಾಗದ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಮಹಾರಾಷ್ಟ್ರದ ಸಂಜಯ್ ಮಧುಕರ್ ಅಂಬೆರ್ಕರ್, ದ್ವಿತೀಯ ಸ್ಥಾನ ಮಣಿಪುರದ ಪೌನಮ್ ರಮೇಶ್ ಮೀಠೆ ಹಾಗೂ ತೃತೀಯ ಸ್ಥಾನ ಎನ್.ಬಿ.ಛಾತ್ರಿ ಪಡೆದುಕೊಂಡಿದ್ದಾರೆ.

ಭಾರತ್ ಫಿಟ್ನೆಸ್ ಪ್ರಶಸ್ತಿ
ಭಾರತ್ ಫಿಟ್ನೆಸ್ ಪ್ರಶಸ್ತಿಯನ್ನು ಕರ್ನಾಟಕದ ಲಾವಣ್ಯ ಕುಮಾರ್ ಪಡೆದರು. ಈ ವಿಭಾಗದ ಗ್ರೂಪ್ 1ರಲ್ಲಿ ಪ್ರಥಮ-ಕರ್ನಾಟಕದ ಬಾದಲ್ ಜೋಷಿ, ದ್ವಿತೀಯ-ಕರ್ನಾಟಕದ ಯುವ ಪ್ರಕಾಶ್. ಗ್ರೂಪ್ 2ರಲ್ಲಿ ಪ್ರಥಮ-ಕರ್ನಾಟಕದ ಲಾವಣ್ಯ ಕುಮಾರ್.

ದ್ವಿತೀಯ-ಮುಹಮ್ಮದ್ ಬರ್ಕತುಲ್ಲಾ.
ಶನಿವಾರ ಸಾಯಂಕಾಲ ನಡೆದ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ರಾಜ್ಯ ಸಭಾ ಸದಸ್ಯ ಆಸ್ಕರ್ ಫೆರ್ನಾರ್ಡಿಸ್ ಪ್ರಶಸ್ತಿ ಪ್ರದಾನ ಮಾಡಿದರು.
 ಇಂಡಿಯನ್ ಫಿಟ್ನಸ್ ಆ್ಯಂಡ್ ಬಾಡಿ ಬಿಲ್ಡಿಂಗ್ ಫೆಡರೇಶನ್ ಪ್ರಧಾನ ಕಾರ್ಯದರ್ಶಿ ಪಿ.ಎಸ್.ಬಿ.ನಾಯ್ಡು, ಬ್ಲೋಸಂ ಫರ್ನಾರ್ಡಿಸ್, ಇಲಿಯಾಸ್ ಸ್ಯಾಂಕ್ಟಿಸ್, ರೇಮಂಡ್ ಡಿಸೋಜ, ಕಿರಣ್ ಕುಮಾರ್, ಮಾಜಿ ಮೇಯರ್ ಆಶ್ರಫ್, ಉದ್ಯಮಿಗಳಾದ ಸಚ್ಚಿದಾನಂದ ಶೆಟ್ಟಿ, ವಾಲ್ಟರ್ ಡಿಸೋಜಾ, ಸೌತ್ ಕೆನರಾ ಅಮೆಚೂರ್ ಬಾಡಿ ಬಿಲ್ಡರ್ಸ್‌ ಅಸೋಸಿಯೇಶನ್‌ನ ಅಧ್ಯಕ್ಷ ಹಾಗೂ ವಿಧಾನ ಪರಿಷತ್‌ನ ಸದಸ್ಯ ಐವನ್ ಡಿಸೋಜ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News