×
Ad

ಮೀಸಲಾತಿ ಜಾರಿಗೊಳಿಸದ್ದಕ್ಕಾಗಿ ಪದವಿ ಮರಳಿಸಿದ ದೃಷ್ಟಿಮಾಂದ್ಯ

Update: 2016-02-13 23:57 IST

ತಿರುನೆಲ್ವೆಲಿ, ಫೆ.13: ಶನಿವಾರ ನಡೆದ ಮನೋನ್ಮಣೀಯಂ ಸುಂದರನಾರ ವಿವಿಯ ಘಟಿಕೋತ್ಸವದಲ್ಲಿ ರಾಜ್ಯಪಾಲ ಹಾಗೂ ಕುಲಾಧಿಪತಿ ಕೆ.ರೋಸಯ್ಯ ಅವರಿಂದ ಜಾನಪದ ಕ್ಷೇತ್ರದಲ್ಲಿ ತನ್ನ ಪಿಎಚ್‌ಡಿ ಪದವಿಯನ್ನು ಸ್ವೀಕರಿಸಿದ ದೃಷ್ಟಿಮಾಂದ್ಯ ವ್ಯಕ್ತಿಯೋರ್ವರು ಅದನ್ನು ಮರಳಿಸುವ ಮೂಲಕ ಕೆಲಕಾಲ ಗೊಂದಲವನ್ನು ಸೃಷ್ಟಿಸಿದರು.

ಪಾಂಡಿದುರೈ ಬಳಿಕ ಪದವಿಯನ್ನು ವಾಪಸ್ ಸ್ವೀಕರಿಸುವಂತೆ ಮಾಡುವಲ್ಲಿ ವಿವಿ ಅಧಿಕಾರಿಗಳು ಯಶಸ್ವಿಯಾದರು.

ಸರಕಾರಿ ಇಲಾಖೆಗಳಲ್ಲಿ ಮತ್ತು ವಿವಿಗಳಲ್ಲಿ ಅಂಗವಿಕಲ ವ್ಯಕ್ತಿಗಳಿಗೆ ಶೇ.3ರಷ್ಟು ಮೀಸಲಾತಿಯನ್ನು ಜಾರಿಗೊಳಿಸದ್ದಕ್ಕಾಗಿ ತಾನು ಸರಕಾರದ ವಿರುದ್ಧ ಪ್ರತಿಭಟಿಸಿದ್ದಕ್ಕಾಗಿ ತನ್ನನ್ನು ವೇದಿಕೆಯಿಂದ ಕೆಳಗಿಳಿಸಲಾಗಿತ್ತು. ಆದ್ದರಿಂದ ತಾನು ಪದವಿಯನ್ನು ವಾಪಸ್ ಮಾಡಿದ್ದಾಗಿ ಪಾಂಡಿದುರೈ ಸುದ್ದಿಗಾರರಿಗೆ ತಿಳಿಸಿದರು. ಮೀಸಲಾತಿಯು ಕಾಗದದ ಮೇಲಷ್ಟೇ ಉಳಿದುಕೊಂಡಿದ್ದು,ಯಾರಿಗೂ ಅದರಿಂದ ಲಾಭವಾಗಿಲ್ಲ ಎಂದು ಅವರು ಆರೋಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News