ಅಂಡರ್-19 ವಿಶ್ವಕಪ್; ಚೊಚ್ಚಲ ಪ್ರಶಸ್ತಿ ಎತ್ತಿದ ವಿಂಡೀಸ್;4ನೆ ಬಾರಿ ಜಯಿಸುವ ಭಾರತದ ಪ್ರಯತ್ನ ವಿಫಲ

Update: 2016-02-14 11:53 GMT

ಮೀರ್‌ಪುರ, ಫೆ.14: ಇಲ್ಲಿ ನಡೆದ ಅಂಡರ್-19 ವಿಶ್ವಕಪ್ ಕ್ರಿಕೆಟ್ ಫೈನಲ್‌ನಲ್ಲಿ ಭಾರತದ ವಿರುದ್ಧ ವೆಸ್ಟ್‌ಇಂಡೀಸ್ ತಂಡ ಐದು ವಿಕೆಟ್‌ಗಳ ಜಯ ಗಳಿಸುವ ಮೂಲಕ ಚೊಚ್ಚಲ ಪ್ರಶಸ್ತಿ ಎತ್ತಿದೆ.
 ಶೇರ್ ಬಾಂಗ್ಲಾ ಸ್ಟೇಡಿಯಂನಲ್ಲಿ ಗೆಲುವಿಗೆ 146 ರನ್‌ಗಳ ಸವಾಲನ್ನು ಪಡೆದ ವಿಂಡೀಸ್ ಐದು ವಿಕೆಟ್ ನಷ್ಟದಲ್ಲಿ ಇನ್ನೂ ಮೂರು ಎಸೆತಗಳು ಬಾಕಿ ಇರುವಾಗಲೇ ಗೆಲುವಿಗೆ ಅಗತ್ಯದ ರನ್ ಸೇರಿಸಿತು.
ಕೇಸಿ ಕರ್ಟಿ ಔಟಾಗದೆ 52 ರನ್(163ನಿ, 125ಎ, 2ಬೌ) ಮತ್ತು ಕೀಮೊ ಪಾಲ್ ಔಟಾಗದೆ 40 ರನ್(82ನಿ, 68 ಎ, 1ಬೌ, 1ಸಿ) ಗಳಿಸಿ ವಿಂಡೀಸ್‌ಗೆ ಗೆಲವು ತಂದು ಕೊಟ್ಟರು.
29 ಓವರ್‌ಗಳಲ್ಲಿ 77ಕ್ಕೆ 5 ವಿಕೆಟ್ ಕಳೆದುಕೊಂಡಿದ್ದ ವಿಂಡೀಸ್‌ಗೆ ಕರ್ಟಿ ಮತ್ತು ಪಾಲ್ ಮುರಿಯದ ಜೊತೆಯಾಟದಲ್ಲಿ ಆರನೆ ವಿಕೆಟ್‌ಗೆ 69 ರನ್ ಸೇರಿಸಿ ತಂಡವನ್ನು ಗೆಲುವಿನ ದಡ ಸೇರಿಸಿದರು. ಕರ್ಟಿ ಪಂದ್ಯಶ್ರೇಷ್ಠ ಮತ್ತು ಎಂ. ಹಸನ್ ಮೀರಝ್ ಸರಣಿಶ್ರೇಷ್ಠ ಪ್ರಶಸ್ತಿ ಹಂಚಿಕೊಂಡರು.
ಟಾಸ್ ಸೋತು ಮೊದಲು ಬ್ಯಾಟಿಂಗ್ ಅವಕಾಶ ಪಡೆದ ಭಾರತ 45.1 ಓವರ್‌ಗಳಲ್ಲಿ 145 ರನ್‌ಗಳಿಗೆ ಆಲೌಟಾಗಿತ್ತು.
ವಿಂಡೀಸ್‌ನ ಜೋಸೆಫ್(3-39), ಜೋನ್ (3-38), ಕೆಎಂಎ ಪಾಲ್(2-17)., ಹೋಲ್ಡರ್(1-20) ಮತ್ತು ಸ್ಪಿಂಗರ್(1-24) ಸಂಘಟಿತ ದಾಳಿಗೆ ಸಿಲುಕಿ 208ನಿಮಿಷಗಳಲ್ಲಿ ಭಾರತ ಬ್ಯಾಟಿಂಗ್ ಮುಗಿಸಿತ್ತು.
ಸರ್ಫರಾಝ್ ಖಾನ್ (51) ಅವರಿಂದ ಏಕೈಕ ಅರ್ಧಶತಕ ದಾಖಲಾಗಿತ್ತು. ಲೊಮ್ರರ್(19) ಮತ್ತು ಬಾಥಮ್(21) ಎರಡಂಕೆಯ ಸ್ಕೋರ್ ದಾಖಲಿಸಿದ್ದರು.
,,,,,,,,,,

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News