ಬಿಜೆಪಿ ಮತ್ತು ಎಬಿವಿಪಿ ವಿರುದ್ಧ ವೈರ ಕಟ್ಟಿಕೊಂಡರೆ ಮಗಳ ಹತ್ಯೆ;ಡಿ ರಾಜರಿಗೆ ಬೆದರಿಕೆ ಕರೆ
Update: 2016-02-14 12:54 IST
ಹೊಸದಿಲ್ಲಿ: ಭಾರತೀಯ ಕಮ್ಯುನಿಸ್ಟ್ ಪಾರ್ಟಿ ನಾಯಕ ರಾಜ್ಯಸಭಾಸದಸ್ಯ ಡಿ ರಾಜ ಅವರು ಜೆಎನ್‌ಯು ವಿದ್ಯಾರ್ಥಿನಿಯಾದ ತನ್ನ ಮಗಳನ್ನು ಕೊಲೆ ನಡೆಸುವ ಬೆದರಿಕೆ ಹಾಕಲಾಗಿದೆ ಎಂದು ತಿಳಿಸಿದ್ದಾರೆ. ಅವರಿಗೆ ಅಜ್ಞಾತ ವ್ಯಕ್ತಿಯೊಬ್ಬ ಫೋನ್ ಮಾಡಿ ನೀವು ಬಿಜೆಪಿ ಮತ್ತು ಎಬಿವಿಪಿ ವಿರುದ್ಧ ವೈರ ಕಟ್ಟಿಕೊಂಡರೆ ನಿಮ್ಮ ಮಗಳ ಹತ್ಯೆ ಮಾಡುವುದಾಗಿ ಹಿಂದಿಯಲ್ಲಿ ಹೇಳಿಕೊಂಡಿದ್ದಾನೆ. ಆಸ್ಟ್ರೇಲಿಯಾದಿಂದ ಅಂಡರ್‌ವರ್ಲ್ಡ್ ಡಾನ್‌ನ ಹೆಸರಿನಲ್ಲಿ ಫೋನ್ ಮಾಡಲಾಗಿದೆ. ಹೀಗೆ ಹಲವು ಬಾರಿ ಫೋನ್ ಬಂದಿದೆ ಎಂದು ರಾಜ ತಿಳಿಸಿದ್ದಾರೆ. ಜೆಎನ್‌ಯು ವಿದ್ಯಾರ್ಥಿ ಯೂನಿಯನ್ ಅಧ್ಯಕ್ಷ ಕನ್ಹಯ್ಯಾ ಕುಮಾರ್ ಬಂಧನ ಕುರಿತು ಗೃಹ ಸಚಿವ ರಾಜ್‌ನಾಥ್ ಸಿಂಗ್‌ರನ್ನು ಭೇಟಿಯಾಗಿ ಚರ್ಚಿಸಿದ ನಂತರ ಮಗಳ ಹತ್ಯೆನಡೆಸುವುದಾಗಿ ಫೋನ್ ಕರೆಬಂದಿದೆ ಎಂದು ಅವರು ತಿಳಿಸಿದ್ದಾರೆ. ಗೃಹಸಚಿವರನ್ನು ಡಿ.ರಾಜ ಹಾಗೂ ಸೀತರಾಂ ಯೆಚುರಿ ನಿನ್ನೆ ಭೇಟಿಯಾಗಿದ್ದರು.