×
Ad

ನವಿಲು, ಕಾಡು ಕೋಣ ಉಪದ್ರಕಾರಿ ಪ್ರಾಣಿ; ಗೋವಾ ಸರಕಾರ

Update: 2016-02-14 13:09 IST

ಪಣಜಿ, ಫೆ.14: ಗೋವಾ ಸರಕಾರ ರೈತರಿಗೆ ಉಪದ್ರಕಾರಿ ಪ್ರಾಣಿಗಳ ಪಟ್ಟಿ ತಯಾರಿಸಿದ್ದು, ಇದರಲ್ಲಿ ರಾಷ್ಟ್ರೀಯ ಪಕ್ಷಿ ನವಿಲು  ಮತ್ತು ರಾಜ್ಯ ಪ್ರಾಣಿ ಕಾಡುಕೋಣ ಸೇರಿಕೊಂಡಿದೆ.
"ನಾವು ಹಲವು ವನ್ಯ ಪ್ರಾಣಿಗಳ ಪಟ್ಟಿ ಮಾಡಿದ್ದೇವೆ. ಮಂಗ, ಕಾಡು ಕೋಣ, ಕಾಡೆಮ್ಮೆ, ನವಿಲು, ರೈತರಿಗೆ ಉಪದ್ರ ಕೊಡುತ್ತಿವೆ.  ಹಲವು ಕಡೆಗಳಲ್ಲಿ ರೈತರ ಬೆಳೆ ನಾಶ ಮಾಡಿದೆ."ಎಂದು ಗೋವಾದ ಕೃಷಿ ಸಚಿವ ರಮೇಶ್‌ ತಾವಾಡ್ಕರ್‌ ತಿಳಿಸಿದ್ದಾರೆ.
 ಸರಕಾರದ ನಿಲುವಿನ ವಿರುದ್ಧ ಪರಿಸರವಾದಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News