ಜೆಎನ್ ಯು ಘಟನೆಗೆ ಹಫೀಜ್ಹ್ ಸಯೀದ್ ಬೆಂಬಲ ಇತ್ತು : ರಾಜನಾಥ್ ಸಿಂಗ್
Update: 2016-02-14 17:07 IST
ಹೊಸದಿಲ್ಲಿ , ಫೆ. 14: ಜವಾಹರ್ ಲಾಲ್ ನೆಹರೂ ವಿವಿಯಲ್ಲಿ ನಡೆದ ಸಂಸತ್ತು ದಾಳಿ ಪ್ರಕರಣದ ಅಪರಾಧಿ ಅಫ಼್ಝಲ್ ಗುರುವನ್ನು ಹೋಗಳಿದ್ದರೆನ್ನಲಾದ ಕಾರ್ಯಕ್ರಮಕ್ಕೆ ಲಷ್ಕರೆ ತೈಬಾದ ಮುಖ್ಯಸ್ಥ ಹಫೀಜ್ಹ್ ಸಯೀದ್ ನ ಬೆಂಬಲವಿತ್ತು ಎಂದು ಗೃಹ ಸಚಿವ ರಾಜ್ ನಾಥ್ ಸಿಂಗ್ ಗಂಭೀರ ಆರೋಪ ಮಾಡಿದ್ದಾರೆ. ರವಿವಾರ ಕಾರ್ಯಕ್ರಮವೊಂದರಲ್ಲಿ ಮಾತನಾಡುತ್ತಾ ಅವರು ಹೀಗೆ ಹೇಳಿದ್ದಾರೆ.
" ಜೆಎನ್ ಯು ಕಿ ಜೊ ಘಟ್ನಾ ಹುಯಿ ಹೈ , ಉಸೇ ಎಲ್ ಈ ಟಿ ಕೆ ಚೀಫ್ ಹಫೀಜ್ಹ್ ಸಯೀದ್ ಕಾ ಸಮರ್ಥನ್ ಪ್ರಾಪ್ತ್ ಹುಆ ಹೈ . ಏ ಭೀ ಬಹುತ್ ದುರ್ಭಾಗ್ಯಪೂರ್ನ್ ಹೈ ( ಜೆಎನ್ ಯು ನಲ್ಲಿ ನಡೆದ ಘಟನೆಗೆ ಹಫೀಜ್ಹ್ ಸಯೀದ್ ಬೆಂಬಲ ಇತ್ತು - ಇದು ದುರ್ಭಾಗ್ಯ ಪೂರ್ಣ) " ಎಂದು ಸಿಂಗ್ ಹೇಳಿದ್ದಾರೆ.
" ನಿರಪರಾಧಿಗಳಿಗೆ ಕಿರುಕುಳ ನೀಡುವುದಿಲ್ಲ , ಆದರೆ ದೇಶ ವಿರೋಧಿ ಚಟುವಟಿಕೆಗಳಲ್ಲಿ ಭಾಗಿಯಾದವರನ್ನು ಬಿಡುವುದಿಲ್ಲ " ಎಂದೂ ರಾಜ್ ನಾಥ್ ಟ್ವೀಟ್ ಮಾಡಿದ್ದಾರೆ.