ಹರ್ಯಾಣ: ಆಸ್ಪತ್ರೆಯಲ್ಲಿ ಹೆರಿಗೆಗೆ ಬಂದ ಮಹಿಳೆಯ ಅತ್ಯಾಚಾರ
Update: 2016-02-14 17:25 IST
ಬಹಾದುರ್‌ಗಡ: ಇಲ್ಲಿನ ಬ್ರಹ್ಮಶಕ್ತಿ ಆಸ್ಪತ್ರೆಗೆ ಹೆರಿಗಾಗಿ ಬಂದಿದ್ದ ಮಹಿಳೆಯೊಬ್ಬರನ್ನು ದುಷ್ಕರ್ಮಿಯೊಬ್ಬ ಅತ್ಯಾಚಾರ ನಡೆಸಿ ಸದ್ದಿಲ್ಲದೆ ಪರಾರಿಯಾದ ಘಟನೆ ವರದಿಯಾಗಿದೆ. ಈ ಘಟನೆ ನಿನ್ನೆ ಬೆಳಗ್ಗಿನ ಜಾವ ಮೂರುಗಂಟೆಯ ಹೊತ್ತಿಗೆ ನಡೆದಿದಿದ್ದು ಆರೋಪಿಯ ಚಿತ್ರ ಸಿಸಿ ಟಿವಿಯಲ್ಲಿ ದಾಖಲಾಗಿದೆ.
ಅತ್ಯಾಚಾರಕ್ಕೊಳಗಾದ ಮಹಿಳೆಯನ್ನು ಆಸ್ಪತ್ರೆಗೆ ಡೆಲಿವರಿಗಾಗಿ ಭರ್ತಿ ಮಾಡಲಾಗಿತ್ತು. ಆಕೆಗೆ ವೈದ್ಯರು ಸಿಸೇರಿಯನ್ ಆಪರೇಶನ್ ಕೂಡ ಮಾಡಿದ್ದರು. ಐಸಿಯುನಲ್ಲಿ ಇರಿಸಲು ತಿಳಿಸಿದ್ದರು. ಅಜ್ಞಾತ ವ್ಯಕ್ತಿ ಬೆಳ್ಳಂಬೆಳಗ್ಗೆ ಅತ್ಯಾಚಾರ ನಡೆಸಿ ಮಾಯವಾಗಿದ್ದಾನೆ. ಆಸ್ಪತ್ರೆಯ ಸಿಬ್ಬಂದಿಗಳಿಗೆ ಸ್ವಲ್ಪವೂ ಗೊತ್ತಾಗಿರಲಿಲ್ಲ. ಮಹಿಳೆಗೆ ಸಿಸೇರಿಯನ್ ಆಗಿದ್ದರಿಂದ ಏನೂ ಮಾಡುವ ಸ್ಥಿತಿಯಲ್ಲಿರಲಿಲ್ಲ. ಪೊಲೀಸರು ಮಹಿಳೆಯ ಹೇಳಿಕೆಯನ್ನು ದಾಖಲಿಸಿಕೊಂಡು ಆರೋಪಿಯನ್ನು ಹುಡುಕುತ್ತಿದ್ದಾರೆ. ಅತ್ಯಾಚಾರಕ್ಕೊಳಗಾದ ಮಹಿಳೆ ಓರ್ವ ಸಬ್‌ಇನ್‌ಸ್ಪೆಕ್ಟರ್ ಪತ್ನಿಯಾಗಿದ್ದಾರೆ.