ಫೆ.23ಕ್ಕೆ ನೇತಾಜಿಯವರ ಇನ್ನೂ 25 ಕಡತಗಳ ಬಿಡುಗಡೆ ಸಾಧ್ಯತೆ
Update: 2016-02-14 17:27 IST
ಹೊಸದಿಲ್ಲಿ,ಫೆ.14: ನೇತಾಜಿ ಸುಭಾಷ್ ಚಂದ್ರ ಬೋಸ್ ಅವರಿಗೆ ಸಂಬಂಧಿಸಿದ 25 ರಹಸ್ಯ ಕಡತಗಳ ಎರಡನೇ ಕಂತು ಈ ತಿಂಗಳು ಬಹಿರಂಗಗೊಳ್ಳುವ ಸಾಧ್ಯತೆಯಿದೆ ಎಂದು ಸಂಸೃತಿ ಸಚಿವ ಮಹೇಶ ಶರ್ಮಾ ಹೇಳಿದ್ದಾರೆ.
ಪ್ರತಿ ತಿಂಗಳು 25 ರಹಸ್ಯ ಕಡತಗಳನ್ನು ಬಿಡುಗಡೆ ಮಾಡಲಿದ್ದೇವೆ. ಈ ತಿಂಗಳು ಬಿಡುಗಡೆಗೊಳ್ಳಲಿರುವ 25 ಕಡತಗಳು ಸಿದ್ಧವಾಗಿವೆ ಎಂದು ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ಅವರು ತಿಳಿಸಿದರು.
ಫೆ.23ರಂದು ರಹಸ್ಯ ಕಡತಗಳ ಎರಡನೇ ಕಂತು ಬಿಡುಗಡೆಗೊಳ್ಳುವ ಸಾಧ್ಯತೆಯಿದೆ. ಇನ್ನು ಮುಂದೆ ಪ್ರತಿ ತಿಂಗಳ 23ನೇ ದಿನಾಂಕದಂದು ಕಡತಗಳು ಬಿಡುಗಡೆಗೊಳ್ಳುವ ನಿರೀಕ್ಷೆಯಿದೆ ಎಂದು ಮೂಲಗಳು ತಿಳಿಸಿವೆ.
ನೇತಾಜಿಯವರ 119ನೇ ಜನ್ಮದಿನವಾದ ಜ.23ರಂದು ಪ್ರಧಾನಿ ನರೇಂದ್ರ ಮೋದಿಯವರು ಸುಮಾರು 100 ರಹಸ್ಯ ಕಡತಗಳನ್ನು ಬಹಿರಂಗಗೊಳಿಸಿದ್ದರು.