ವೇಶ್ಯಾವಾಟಿಕೆ ಹೆಸರಲ್ಲಿ ಇನ್ನು ಪೊಲೀಸರು ಕೀಟಲೆಕೊಡುವಂತಿಲ್ಲ!

Update: 2016-02-15 06:50 GMT
Photo Credit: AFP

ಹೊಸದಿಲ್ಲಿ: ಹೊಟೇಲ್‌ಗಳಿಗೆ ದಾಳಿ ಮಾಡಿ ಅನೈತಿಕತೆಯಲ್ಲಿ ತೊಡಗಿಕೊಂಡಿದ್ದಾರೆಂದು ಬಡಪಾಯಿಗಳನ್ನು ಪೀಡಿಸಲಾಗುತ್ತಿದೆ. ಫೈವ್ ಸ್ಟಾರ್ ಹೊಟೇಲ್‌ಗಳಲ್ಲಿ ಏನು ಬೇಕಿದ್ದರೂ ನಡೆದರೆ ತೊಂದರೆಯಿಲ್ಲ. ಸಣ್ಣಪುಟ್ಟ ಲಾಡ್ಜ್‌ಗಳಿಗೆ ಹೊಟೇಲ್‌ಗಳಿಗೆ ಪೊಲೀಸ್ ದಾಳಿ ನಡೆಯುತ್ತಿದೆ. ಅವರನ್ನು ಮೆರವಣಿಗೆಯಂತೆ ಕರೆದುಕೊಂಡು ಹೋಗುವುದು ಪತ್ರಿಕೆಯಲ್ಲಿ ಫೋಟೊ ಅಚ್ಚು ಹಾಕಿಸುವುದಿತ್ಯಾದಿ ಮಾಡಿ ಅಪಮಾನಿಸಲಾಗುತ್ತಿದೆ. ಖಾಸಗಿ ಲೈಂಗಿಕ ವೃತ್ತಿಯ ಮೇಲೆನಿಷಿದ್ಧ ಹೇರದಿರುವ ಈ ದೇಶದಲ್ಲಿ ವಯಸ್ಕರಿಗೆ ಸಂಕಷ್ಟಕ್ಕೀಡು ಮಾಡುವುದು ಅಗತ್ಯವಿಲ್ಲ.

   ಇಂತಹದೊಂದು ನಿರ್ದೇಶಗಳೊಂದಿಗೆ 2011ರಲ್ಲಿ ಸುಪ್ರೀಂ ಕೋರ್ಟ್ ನೇಮಿಸಿದ ಪ್ಯಾನೆಲೊಂದು ವರದಿ ತಯಾರಿಸಿದೆ ಎಂಬ ಮಾಹಿತಿ ಬಹಿರಂಗವಾಗಿದೆ. ಮಾರ್ಚ್‌ನಲ್ಲಿ ಈ ಪ್ಯಾನೆಲ್ ವರದಿ ಸಲ್ಲಿಸಲಿದೆ. ಕೆಂಪು ಬೀದಿಗಳಲ್ಲಿರುವವರಿಗೆ ಪೊಲೀಸರು ಉಪಟಳ ನೀಡುತ್ತಿದ್ದಾರೆಂಬುದನ್ನು ಪ್ಯಾನೆಲ್ ಕಂಡುಕೊಂಡಿದೆ. ವೇಶ್ಯಾಲಯ ಕಾನೂನು ಬಾಹಿರವಲ್ಲ ಎಂದಿರುವಾಗ ಆ ವೃತ್ತಿಮಾಡುವವರಿಗೆ ತೊಂದರೆ ನೀಡಬಾರದು ಇತ್ಯಾದಿ ಸೂಚನೆಗಳನ್ನು ಈ ಪ್ಯಾನೆಲ್ ನ್ಯಾಯಾಲಯದ ಮುಂದಿಡಲಿದೆ ಎನ್ನಲಾಗಿದೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News