×
Ad

ಸಾನಿಯಾ- ಹಿಂಗಸ್ ಮುಡಿಗೆ ಸೇಂಟ್‌ ಪೀಟರ್ಸ್​ಬರ್ಗ್ ಓಪನ್‌ ಕಿರೀಟ

Update: 2016-02-15 13:41 IST

ಸೇಂಟ್‌ ಪೀಟರ್ಸ್​ಬರ್ಗ್,ಫೆ.15:  ವಿಶ್ವದ ಅಗ್ರ ಶ್ರೇಯಾಂಕಿತ ಮಹಿಳಾ ಟೆನಿಸ್ ಜೋಡಿ ಸಾನಿಯಾ ಮಿರ್ಜಾ ಮತ್ತು ಮಾರ್ಟಿನಾ ಹಿಂಗಿಸ್ ರವಿವಾರ ರಾತ್ರಿ ನಡೆದ ಸೇಂಟ್‌ ಪೀಟರ್ಸ್​ಬರ್ಗ್  ಲೇಡೀಸ್ ಟ್ರೋಫಿ ಟೂರ್ನಿಯ ಫೈನಲ್  ಹಣಾಹಣಿಯಲ್ಲಿ ಪ್ರಶಸ್ತಿ  ಮುಡಿಗೇರಿಸಿಕೊಂಡಿದ್ದಾರೆ.
ಈ ಗೆಲುವಿನೊಂದಿಗೆ ಸಾನಿಯಾ-ಹಿಂಗಿಸ್‌  ಜಯದ ಅಜೇಯ ಓಟವನ್ನು ನಲುವತ್ತಕ್ಕೆ ಏರಿಸಿದ್ದಾರೆ.
ಪ್ರಸಕ್ತ ವರ್ಷ ಅಜೇಯವಾಗಿ ಮುನ್ನಡೆದಿರುವ  ಸಾನಿಯಾ ಮತ್ತು ಹಿಂಗಿಸ್‌ ಅವರು ಸತತ 9ನೇ ಹಾಗೂ ಒಟ್ಟಾರೆ 13ನೇ ಪ್ರಶಸ್ತಿ ಜಯಿಸಿದ್ದಾರೆ.
ರಷ್ಯಾದ ವೇರಾ ಡುಶೆವಿನಾ ಹಾಗೂ ಝೆಕ್  ಗಣರಾಜ್ಯದ ಬಾರ್ಬರಾ ಕ್ರೇಜ್‌ಸ್ಕೋವಾ ಅವರನ್ನು  6-3, 6-1 ನೇರಸೆಟ್​ಗಳಿಂದ ಮಣಿಸಿ ಪ್ರಶಸ್ತಿ ಎತ್ತಿಕೊಂಡರು. ಇವರ ನಡುವಿನ ಹೋರಾಟ ಒಂದು ಗಂಟೆ ಕಾಲ ನಡೆಯಲಿಲ್ಲ. ಕೇವಲ 56 ನಿಮಿಷಗಳಲ್ಲಿ ಕೊನೆಗೊಂಡಿತು.
ನೊವೊಟ್ನಾ-ಹೆಲೆನಾ ದಾಖಲೆ  ಹತ್ತಿರ: 1990ರಲ್ಲಿ ಸತತ 44 ಗೆಲುವು ಸಾಧಿಸಿದ್ದ ಝೆಕ್‌ನ ​ ಜಾನಾ ನೊವೊಟ್ನಾ-ಹೆಲೆನಾ ಸುಕೊವಾ ಜೋಡಿಯ ದಾಖಲೆ ಸರಿಗಟ್ಟಲು ಸಾನಿಯಾ-ಹಿಂಗಿಸ್ ಇನ್ನು ನಾಲ್ಕು ಪಂದ್ಯಗಳಲ್ಲಿ ಗೆಲುವ ದಾಖಲಿಸಬೇಕಾಗಿದೆ.  ಆದರೆ ವಿಶ್ವದಾಖಲೆಗಾಗಿ  ಇನ್ನೂ ಬಹಳ  ದೂರ ಕ್ರಮಿಸಬೇಕಾಗಿದೆ. ನವ್ರಾಟಿ ಲೋವಾ-ಪಾಮ್ ಶ್ರಿವರ್ 1983ರಿಂದ 85ರ ನಡುವೆ ಸತತ 109 ಪಂದ್ಯ ಗೆದ್ದಿರುವುದು ವಿಶ್ವದಾಖಲೆಯಾಗಿ ಉಳಿದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News