ಲಿಬಿಯನ್ನರ ಬಿಡುಗಡೆಗೆ ಯುಎಇಗೆ ವಿಶ್ವಸಂಸ್ಥೆ ಕರೆ
Update: 2016-02-15 21:47 IST
ಜಿನೇವ, ಫೆ. 15: ಒಂದೂವರೆ ವರ್ಷದಿಂದ ಬಂಧನದಲ್ಲಿದ್ದ ವೇಳೆ ಚಿತ್ರಹಿಂಸೆಗೆ ಒಳಗಾಗಿರುವ ಐವರು ಲಿಬಿಯನ್ನರನ್ನು ಬಿಡುಗಡೆ ಮಾಡುವಂತೆ ವಿಶ್ವಸಂಸ್ಥೆಯ ಮಾನವಹಕ್ಕುಗಳ ಪರಿಣತರು ಯುನೈಟಡ್ ಅರಬ್ ಎಮಿರೇಟ್ಸ್‌ಗೆ ಕರೆ ನೀಡಿದ್ದಾರೆ.
ಈ ಪೈಕಿ ಮೂವರು ಕೆನಡ ಅಥವಾ ಅಮೆರಿಕದ ದ್ವಿಪೌರತ್ವವನ್ನು ಹೊಂದಿದ್ದಾರೆ.
ಚಿತ್ರಹಿಂಸೆಯಿಂದಾಗಿ ಅವರು ದೃಷ್ಟಿ ಮತ್ತು ಕೇಳುವ ಸಾಮರ್ಥ್ಯವನ್ನು ಕಳೆದುಕೊಂಡಿದ್ದು ಆರೋಗ್ಯ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ ಹಾಗೂ ಅವರಿಗೆ ವೈದ್ಯಕೀಯ ನೆರವು ಸಿಗುತ್ತಿಲ್ಲ ಎಂದು ವಿಶ್ವಸಂಸ್ಥೆಯ ಆರೋಗ್ಯ ಹಕ್ಕು ಅಧಿಕಾರಿ ಡೇನಿಯಸ್ ಪುರಸ್ ಹೇಳಿದ್ದಾರೆ.