×
Ad

ಅಮೆರಿಕ, ಬ್ರಿಟನ್ ಹೊರತುಪಡಿಸಿ ಎಲ್ಲರಿಗೂ ‘ಬಂದ ಬಳಿಕ ವಿಸಾ’

Update: 2016-02-15 21:48 IST

ಟೆಹರಾನ್, ಫೆ. 15: ಬ್ರಿಟನ್, ಅಮೆರಿಕ ಮತ್ತು ಇತರ ಏಳು ದೇಶಗಳನ್ನು ಹೊರತುಪಡಿಸಿ, ಎಲ್ಲ ದೇಶಗಳ ನಾಗರಿಕರಿಗೆ ಇರಾನ್‌ನ ವಿಮಾನ ನಿಲ್ದಾಣಗಳಿಗೆ ಬಂದ ಬಳಿಕ ವೀಸಾ ನೀಡುವುದಾಗಿ ಇರಾನ್ ಸೋಮವಾರ ಘೋಷಿಸಿದೆ.

ದೇಶದಲ್ಲಿ ಪ್ರವಾಸೋದ್ದಿಮೆಯನ್ನು ಉತ್ತೇಜಿಸುವುದಕ್ಕಾಗಿ ಈ ಕ್ರಮ ತೆಗೆದುಕೊಂಡಿರುವುದಾಗಿ ವಿದೇಶ ಸಚಿವಾಲಯದ ವಕ್ತಾರರು ತಿಳಿಸಿದರು. ಇತರ 7 ದೇಶಗಳ ಹೆಸರನ್ನು ಅವರು ಬಹಿರಂಗಪಡಿಸಲಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News