ಅಮೆರಿಕ ಸುಪ್ರೀಂ ಕೋರ್ಟ್ ನ್ಯಾಯಾಧೀಶರ ಸ್ಥಾನಕ್ಕೆ 3 ಭಾರತೀಯ ಮೂಲದ ಅಭ್ಯರ್ಥಿಗಳು
ವಾಶಿಂಗ್ಟನ್, ಫೆ. 16: ಅಮೆರಿಕದ ಸುಪ್ರೀಂ ಕೋರ್ಟ್‌ಗೆ ನೇಮಕಗೊಳ್ಳಬಹುದಾದ ಸಂಭಾವ್ಯ ಅಭ್ಯರ್ಥಿಗಳ ಪಟ್ಟಿಯಲ್ಲಿ ಮೂವರು ಭಾರತೀಯ ಅಮೆರಿಕನ್ ಕಾನೂನು ಪಂಡಿತರೂ ಸೇರಿದ್ದಾರೆ.
ಟೆಕ್ಸಾಸ್‌ನ ಹೊಲವೊಂದರಲ್ಲಿ ಸುಪ್ರೀಂ ಕೋರ್ಟ್ ನ್ಯಾಯಾಧೀಶ ಆ್ಯಂಟನಿನ್ ಸ್ಕಾಲಿಯ ಅಕಾಲಿಕ ಮರಣದ ಹಿನ್ನೆಲೆಯಲ್ಲಿ ಅಧ್ಯಕ್ಷ ಬರಾಕ್ ಒಬಾಮ ಹೊಸ ನೇಮಕಾತಿಗೆ ಮುಂದಾಗಿದ್ದಾರೆ.
ಚಂಡೀಗಢ ಸಂಜಾತ ಶ್ರೀನಿವಾಸನ್‌ರ ಹೆಸರು ಮುಂಚೂಣಿಯಲ್ಲಿದೆ. 48 ವರ್ಷದ ಅವರು ಪ್ರಸಕ್ತ ಕೊಲಂಬಿಯ ಸರ್ಕೀಟ್ ಜಿಲ್ಲೆಯಲ್ಲಿ ಮೇಲ್ಮನವಿ ನ್ಯಾಯಾಲಯದ ಸರ್ಕೀಟ್ ನ್ಯಾಯಾಧೀಶರಾಗಿದ್ದಾರೆ. ಅವರು ಒಬಾಮರ ಕೃಪೆ ಹೊಂದಿದ್ದಾರೆ ಎಂದು ಹೇಳಲಾಗಿದೆ.
2010 ಮೇ ತಿಂಗಳಿನಿಂದ 2011 ಜೂನ್‌ವರೆಗೆ ಅಮೆರಿಕದ ಉಸ್ತುವಾರಿ ಸಾಲಿಸಿಟರ್ ಜನರಲ್ ಆಗಿದ್ದ ನೀಲ್ ಕತ್ಯಾಲ್‌ರ ಹೆಸರು ಕೂಡ ಪಟ್ಟಿಯಲ್ಲಿದೆ.
ಪಟ್ಟಿಯಲ್ಲಿರುವ ಇನ್ನೊಂದು ಭಾರತೀಯ ಮೂಲದ ಸಂಭಾವ್ಯ ಅಭ್ಯರ್ಥಿ ಕ್ಯಾಲಿಫೋರ್ನಿಯ ಅಟಾರ್ನಿ ಜನರಲ್ ಕಮಲಾ ಹ್ಯಾರಿಸ್. ಅವರು ಒಬಾಮಗೆ ಆತ್ಮೀಯರು ಎಂದು ಹೇಳಲಾಗಿದೆ.