×
Ad

ತೈಲ ಉತ್ಪಾದನೆ ಸ್ತಂಭನಕ್ಕೆ ಸೌದಿ ಆರೇಬಿಯ, ರಶ್ಯ ಸಮ್ಮತಿ

Update: 2016-02-16 23:21 IST

 ವಿಶ್ವದಲ್ಲೇ ಕಚ್ಚಾ ತೈಲದ ಅತಿ ದೊಡ್ಡ ಪೂರೈಕೆದಾರರಾದ ಸೌದಿ ಆರೇಬಿಯ ಹಾಗೂ ರಶ್ಯ, ತಮ್ಮ ತೈಲ ಉತ್ಪಾದನೆಯನ್ನು ಜನವರಿ ಮಟ್ಟದಲ್ಲಿ ಸ್ತಂಭನಗೊಳಿಸಲು ಸಮ್ಮತಿಸಿವೆ. ಅಧಿಕ ತೈಲ ಪೂರೈಕೆಯಿಂದ ತೈಲ ದರದಲ್ಲಿ ಭಾರೀ ಕುಸಿತವುಂಟಾಗಿರುವ ಹಿನ್ನೆಲೆಯಲ್ಲಿ ಅವು ಈ ಒಪ್ಪಂದಕ್ಕೆ ಬಂದಿವೆ. ಕತರ್‌ನಲ್ಲಿ ನಡೆದ ಮಾತುಕತೆಯ ವೇಳೆ ಈ ನಿರ್ಧಾರ ಕೈಗೊಳ್ಳಲಾಗಿದೆ. ಕತರ್ ಹಾಗೂ ವೆನೆಝುವೆಲಾ ಕೂಡಾ ತಮ್ಮ ಉತ್ಪಾದನೆಯನ್ನು ಸ್ತಂಭನಗೊಳಿಸಲು ನಿರ್ಧರಿಸಿರುವುದಾಗಿ ಸೌದಿ ತೈಲ ಸಚಿವರು ತಿಳಿಸಿದ್ದಾರೆ. ಈ ಘೋಷಣೆಯ ಬಳಿಕ ಲಂಡನ್ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ದರದಲ್ಲಿ 1.2 ಶೇಕಡ ಏರಿಕೆಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News