×
Ad

ಅಪಾಯಕಾರಿ ಹೈಟೆನ್ಷನ್ ವಿದ್ಯುತ್ ತಂತಿಗಳು

Update: 2016-02-16 23:32 IST

ಬೆಂಗಳೂರು ಯಶವಂತಪುರದಿಂದ ನೆಲಮಂಗಲದವರೆಗೆ ನಿರ್ಮಿಸಿರುವ ರಾಷ್ಟ್ರೀಯ ಹೆದ್ದಾರಿಯ ಮೇಲ್ಸೇತುವೆಗಳ ಮೇಲೆ ಹೈಟೆನ್ಷನ್ ವಿದ್ಯುತ್ ತಂತಿಗಳು ಅತ್ಯಂತ ಕಡಿಮೆ ಕೆಳಮಟ್ಟದಲ್ಲಿ ಹಾದು ಹೋಗಿರುತ್ತದೆ. ಮೇಲ್ಸೇತುವೆ ನಿರ್ಮಾಣಕ್ಕೂ ಮುನ್ನ ಈ ತಂತಿಗಳನ್ನು ಅಳವಡಿಸಲಾಗಿತ್ತು. ಮೇಲ್ಸೇತುವೆ ನಿರ್ಮಾಣದ ನಂತರ ಇದರ ಎತ್ತರ ಅಪಾಯಕಾರಿ ಮಟ್ಟದಲ್ಲಿದೆ. ಮೇಲ್ಸೇತುವೆ ಮೇಲೆ ಅತೀ ಎತ್ತರದ ವಾಹನಗಳು ಸಂಚಾರ ಮಾಡುತ್ತಿರುತ್ತವೆ. ಅಲ್ಪ ಮಟ್ಟದಲ್ಲಿ ಅಜಾಗರೂಕತೆ ವಹಿಸಿದರೆ ವಾಹನಗಳು ಈ ತಂತಿಗಳಿಗೆ ಬಡಿಯುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ರಾಷ್ಟ್ರೀಯ ಹೆದ್ದಾರಿಗಳಲ್ಲಿರುವ ಮೇಲ್ಸೇತುವೆಗಳ ಮೇಲೆ ಹಾದು ಹೋಗಿರುವ ಹೈಟೆನ್ಷನ್ ವೈರುಗಳ ಎತ್ತರವನ್ನು ಮತ್ತಷ್ಟು ಹೆಚ್ಚಿಸುವಂತಹ ಕೆಲಸವನ್ನು ಕೂಡಲೇ ಮಾಡಬೇಕಿದೆ.

Similar News