ಕನ್ಹಯ್ಯಾ ದೇಶದ್ರೋಹಿ ಎನ್ನುವುದಕ್ಕೆ ಸಾಕ್ಷವಿಲ್ಲ: ರಕ್ಷಣಾ ಅಧಿಕಾರಿಗಳು
Update: 2016-02-16 23:49 IST
ಹೊಸದಿಲ್ಲಿ, ಫೆ.16 : ಜೆಎನ್‌ಯು ಘಟನೆಗೆ ಲಷ್ಕರೆ ತಯ್ಯಿಬಾ ಸಂಘಟನೆಯ ಮುಖ್ಯಸ್ಥ ಹಫೀಝ್ ಸಯೀದ್ ಬೆಂಬಲವಿದೆಯೆಂದು ಕೇಂದ್ರ ಗೃಹ ಸಚಿವರ ವಿವಾದಿತ ಹೇಳಿಕೆ ಹಾಗೂ ವಿದ್ಯಾರ್ಥಿ ಸಂಘ ನಾಯಕ ಕನ್ಹಯ್ಯಾ ಕುಮಾರ್ ಮಾಡಿದ್ದಾರೆನ್ನಲಾದ ದೇಶದ್ರೋಹಿ ಭಾಷಣದ ಬಗ್ಗೆ ತಮ್ಮ ಬಳಿ ಯಾವುದೇ ಸಾಕ್ಷವಿಲ್ಲವೆಂದು ರಕ್ಷಣಾ ಅಧಿಕಾರಿಗಳು ಹೇಳಿದ್ದಾರೆ.
‘‘ಕನ್ಹಯ್ಯ ವಿರುದ್ಧ ಯಾವುದೇ ಸಾಕ್ಷ ನಮಗೆ ಸಿಕ್ಕಿಲ್ಲವಾದರೂ ದಿಲ್ಲಿ ಪೊಲೀಸರು ಆತನನ್ನು ಬಂಧಿಸಿದ್ದಾರೆಂದಾದರೆ ಅವರಲ್ಲಿ ಆತನ ವಿರುದ್ಧ ಯಾವುದಾದರೂ ಸಾಕ್ಷವಿರಬೇಕು’’ ಎಂದು ಹೆಸರು ಹೇಳಲಿಚ್ಛಿಸದ ರಕ್ಷಣಾ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಮೇಲಾಗಿ ಈ ವಿವಾದದಲ್ಲಿ ಹಫೀಝ್ ಸಯೀದ್ ಭಾಗಿಯಾಗಿದ್ದಾನೆ ಎನ್ನುವುದಕ್ಕೆ ಯಾವುದೇ ಗುಪ್ತಚರ ಮಾಹಿತಿಯೂ ಲಭ್ಯವಿಲ್ಲ ಎಂದು ತಿಳಿದು ಬಂದಿದೆಯೆಂದು ಆ ಅಧಿಕಾರಿ ಹೇಳಿದ್ದಾರೆ.