ಜೆಎನ್‌ಯು ವಿವಾದ : 'ಜನ್ ಸ್ವಾಭಿಮಾನ್ ಅಭಿಯಾನ್' ತಯಾರಿ ನಡೆಸುತ್ತಿರುವ ಬಿಜೆಪಿ

Update: 2016-02-17 07:30 GMT

ನವದೆಹಲಿ : ದೇಶದ ಜನರಲ್ಲಿ 'ರಾಷ್ಟ್ರೀಯತೆಯ ಭಾವನೆಯನ್ನು ಜಾಗೃತಗೊಳಿಸುವ ನಿಟ್ಟಿನಲ್ಲಿ ಹಾಗೂ ಪ್ರತ್ಯೇಕತಾವಾದ ಹಾಗೂ ರಾಜಕೀಯ ಷಡ್ಯಂತ್ರವನ್ನು ಸೋಲಿಸಲು ಬಿಜೆಪಿ ಫೆಬ್ರವರಿ 18ರಿಂದ 20ರವರೆಗೆದೇಶದಾದ್ಯಂತ ಜನ್ ಸ್ವಾಭಿಮಾನ್ ಅಭಿಯಾನ್ ಆಯೋಜಿಸಲು ಚಿಂತಿಸುತ್ತಿದೆ. ದೇಶದ್ರೋಹದ ಆರೋಪದ ಮೇಲೆಜೆಎನ್‌ಯುವಿದ್ಯಾರ್ಥಿ ಯೂನಿಂನ್ ನಾಯಕ ಕನ್ಹಯ್ಯ ಕುಮಾರ್ ಬಂಧನದ ನಂತರ ದೇಶದಾದ್ಯಂತ ಭುಗಿಲೆದ್ದ ಆಕ್ರೋಶದ ನಡುವೆ ಹಾಗೂ ಸರಕಾರ ವಾಕ್ ಸ್ವಾತಂತ್ರ್ಯವನ್ನು ದಮನಿಸುತ್ತಿದೆಯೆಂಬ ಆರೋಪ ಕೇಳಿ ಬರುತ್ತಿರುವ ಹಿನ್ನೆಲೆಯಲ್ಲಿ ಪಕ್ಷ ಈ ಅಭಿಯಾನಕ್ಕೆ ಕೈ ಹಾಕಿದೆ.

ಪಕ್ಷದ ಕೇಂದ್ರ ಕಚೇರಿಯಿಂದ ಎಲ್ಲಾ ರಾಜ್ಯ ಘಟಕಗಳಿಗೂ ಪತ್ರಗಳು ರವಾನೆಯಾಗಿದ್ದು ಎಲ್ಲಾ ಘಟಕಗಳೂಈ ಅಭಿಯಾನದಂಗವಾಗಿ ಕಾರ್ಯಕ್ರಮಗಳನ್ನು ಆಯೋಜಿಸಬೇಕೆಂದು ಹೇಳಿದೆ. ''ಅಭಿಯಾನದ ಭಾಗವಾಗಿ ಬೀದಿ ನಾಟಕ, ವಿಚಾರ ಸಂಕಿರಣ, ಸಾರ್ವಜನಿಕ ಸ್ಥಳಗಳಲ್ಲಿ ರಾಷ್ಟ್ರೀಯತೆಯ ಭಾವನೆ ಮೂಡಿಸುವಂತಹಗೀತಗಳ ಗಾಯನ, ಸಭೆಗಳನ್ನು ಆಯೋಜಿಸಬಹುದು, ರಾಷ್ಟ್ರೀಯತೆಯ ಭಾವನೆಯನ್ನು ಜಾಗೃತಗೊಳಿಸುವುದು ಇದರ ಮುಖ್ಯ ಉದ್ದೇಶ," ಎಂದು ಪಕ್ಷ ಹೇಳಿಕೊಂಡಿದೆ.


''ಬಿಜೆಪಿ ದೇಶದ ಏಕತೆ, ಸಮಗ್ರತೆ ಹಾಗೂ ಅಭಿವೃದ್ಧಿಗೆ ಬದ್ಧವಾಗಿದೆ. ದೇಶವೆದುರಿಸುತ್ತಿರುವ ಬೆದರಿಕೆಯ ಬಗ್ಗೆ ಜನರಲ್ಲಿ ಅರಿವನ್ನುಂಟು ಮಾಡಬೇಕು,''ಎಂದು ಹಿರಿಯ ಬಿಜೆಪಿ ನಾಯಕರೊಬ್ಬರು ತಿಳಿಸಿದರು. ಮುಂಬರುವ ಸಂಸತ್ ಬಜೆಟ್ ಅಧಿವೇಶನದಲ್ಲಿ ಜೆಎನ್‌ಯು ಹಗರಣವನ್ನು ವಿಪಕ್ಷಗಳು ಸರಕಾರದ ವಿರುದದ್ಧ ವಾಗ್ದಾಳಿ ನಡೆಸಲು ಉಪಯೋಗಿಸುವ ಎಲ್ಲಾ ಸಂಭವವೂ ಇರುವುದರಿಂದಈ ಅಭಿಯಾನ ಯಶಸ್ವಿಗೊಂಡಿದ್ದೇ ಆದಲ್ಲಿ ವಿಪಕ್ಷಗಳನ್ನು ಎದುರಿಸಲು ಸಹಕಾರಿಯಾಗಬಹುದೆಂಬ ಆಶಾವಾದದಲ್ಲಿದೆ ಸರಕಾರ. ಅದೇ ಸಮಯ ಜೆಎನ್‌ಯು ಹಗರಣದಿಂದಾಗಿಯೇ ಬಿಜೆಪಿ ಎಂಟು ರಾಜ್ಯಗಳ 12 ಅಸೆಂಬ್ಲಿ ಕ್ಷೇತ್ರಗಳಿಗೆ ನಡೆದ ಉಪಚುನಾವಣೆಯಲ್ಲಿ ಏಳು ಸ್ಥಾನಗಳನ್ನುಪಡೆದಿದೆಯೆಂಬುದನ್ನು ಹಲವು ಬಿಜೆಪಿ ನಾಯಕರು ಅಲ್ಲಗಳೆಯುವುದಿಲ್ಲ. ಜೆಎನ್‌ಯು ಘಟನೆ ಫೆಬ್ರವರಿ 9ರಂದು ನಡೆದಿದ್ದರೆ, ಚುನಾವಣೆಯುಚುನಾವಣೆ ಫೆಬ್ರವರಿ 13ರಂದು ಬಿಜೆಪಿ ಹಾಗೂ ವಿಪಕ್ಷಗಳ ವ್ಯಾಗ್ಯುದ್ಧದ ನಡುವೆಯೇ ನಡೆದಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News