.ಮಹಾರಾಷ್ಟ್ರವನ್ನು ಬರಮುಕ್ತಗೊಳಿಸುವ ಯೋಜನೆಗೆ ಆಮಿರ್‌ ಖಾನ್ ರಾಯಭಾರಿ...!

Update: 2016-02-17 07:33 GMT

ಮುಂಬೈ, ಫೆ.17: ಅಸಹಿಷ್ಣುತೆಯ ವಿವಾದದಲ್ಲಿ ಇನ್‌ಕ್ರೇಡಿಬಲ್‌ ಇಂಡಿಯಾ  ರಾಯಭಾರಿ ಹುದ್ದೆ ಕಳೆದುಕೊಂಡಿದ್ದ ಬಾಲಿವುಡ್‌ ಸ್ಟಾರ‍್ ಆಮಿರ‍್ ಖಾನ್‌ ಅವರನ್ನು ಇದೀಗ ಮಹಾರಾಷ್ಟ್ರ ಸರಕಾರ ಬರಮುಕ್ತ ಮಹಾರಾಷ್ಟ್ರ ಯೋಜನೆಗೆ ರಾಯಭಾರಿಯನ್ನಾಗಿ ನೇಮಕ ಮಾಡಿದ್ದು, ಆದೇಶ ಇನ್ನಷ್ಟೇ ಹೊರಬರಲಿದೆ.
ಮಹಾರಾಷ್ಟ್ರ ಮುಖ್ಯಮಂತ್ರಿ ದೇವೆಂದ್ರ ಫಡ್ನಾವೀಸ್‌ ಇಂದು ನಡೆಯಲಿರುವ ಸಮಾರಂಭದಲ್ಲಿ ಆಮಿರ‍್ ಖಾನ್‌ ಅವರನ್ನು ಅಧಿಕೃತವಾಗಿ ರಾಯಭಾರಿಯಾಗಿ ಘೋಷಣೆ ಮಾಡಲಿದ್ದಾರೆ.
ಆಮಿರ್‌ ಖಾನ್‌ ಅವರಲ್ಲಿ ಈ ಸಂಬಂಧ ಮುಖ್ಯಮಂತ್ರಿ ಫಡ್ನಾವೀಸ್‌ ಈಗಾಗಲೇ ಮಾತುಕತೆ ನಡೆಸಿದ್ಧಾರೆಂದು ಮೂಲಗಳು ತಿಳಿಸಿವೆ.
ಬರದ ಹಿನ್ನೆಲೆಯಲ್ಲಿ ಕಳೆದ ಮೂರು ತಿಂಗಳುಗಳ ಅವಧಿಯಲ್ಲಿ ಮಹಾರಾಷ್ಟ್ರದಲ್ಲಿ ಸುಮಾರು ಒಂದು ಸಾವಿರ ರೈತರು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಸರಾಕರ ಬಾಂಬೈ ಹೈಕೋರ್ಟ್‌‌ಗೆ ಅಫಿದಾವಿಟ್‌ ಸಲ್ಲಿಸಿದೆ.  ಮರಾರಾಷ್ಟ್ರ ಸರಕಾರ ಬರ ಪರಿಸ್ಥಿತಿಯನ್ನು ನಿವಾರಿಸಲು ರಾಜ್ಯಾದ್ಯಂತ ಜಲ ಸಂರಕ್ಷಣಾ ಯೋಜನೆಯನ್ನು ಕಾರ್ಯಗತಗೊಳಿಸಲಿದೆ. ಜಲ ಯುಕ್ತ್‌ ಶಿವಾರ್‌ ಯೋಜನೆಯಡಿ ಮುಂದಿನ ಐದು ವರ್ಷಗಳಲ್ಲಿ ರಾಜ್ಯದ ಪ್ರತಿಯೊಂದು ಗ್ರಾಮವನ್ನು ಬರಮುಕ್ತವನ್ನಾಗಿಸುವುದು ಸರಕಾರದ ಯೋಜನೆಯಾಗಿದೆ. ಆಮಿರ‍್ ಖಾನ್‌ ಈ ಯೋಜನೆಯ ಅನುಷ್ಠಾನದಲ್ಲಿ ಸರಕಾರದೊಂದಿಗೆ ಕೈ ಜೋಡಿಸಲಿದ್ದಾರೆ.
ಕಳೆದ ವರ್ಷ ಆಮಿರ್‌ ಖಾನ್‌ ಅವರು ಮುಖ್ಯ ಮಂತ್ರಿಗಳ ಪರಿಹಾರ ನಿಧಿಗೆ ನೀರು ಪೂರೈಕೆ ಯೋಜನೆಗೆ ಹನ್ನೊಂದು ಲಕ್ಷ ರೂ. ದೇಣಿಗೆ ನೀಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News