×
Ad

ರಾಹುಲ್ ಗಾಂಧಿಗೆ ಮೆಡಿಕಲ್ ಕಾರ್ಡ್ ಮಾಡಿಸಿ ಚಿಕಿತ್ಸೆಗೆ ಮೆಂಟಲ್ ವಿಭಾಗವನ್ನು ಸೂಚಿಸಿದ ವೈದ್ಯ ವಿದ್ಯಾರ್ಥಿ!

Update: 2016-02-17 18:10 IST

ಲಖ್ನೊ: ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಜೆಎನ್‌ಯು ನಲ್ಲಿ ನೀಡಿದ ಹೇಳಿಕೆಗಾಗಿ ಮೆಡಿಕಲ್ ವಿದ್ಯಾರ್ಥಿಯೊಬ್ಬ ಕಿಂಗ್ ಜಾರ್ಜ್ ಯುನಿವರ್ಸಿಟಿಯಲ್ಲಿ ಅವರಿಗೆ ಚಿಕಿತ್ಸೆಗಾಗಿ ಮೆಡಿಕಲ್ ಕಾರ್ಡ್ ಮಾಡಿಸಿದ್ದಾನೆ. ವಿದ್ಯಾರ್ಥಿಯು ಜೆಎನ್‌ಯು ವಿಚಾರದಲ್ಲಿ ನೀಡಿರುವ ಹೇಳಿಕೆಯನ್ನು ಗಮನಿಸಿದಾಗ ರಾಹುಲ್‌ಗೆ ಮಾನಸಿಕ ತೊಂದರೆ ಇದೆಯೆಂದು ಅನಿಸುತ್ತಿದೆ. ಆದ್ದರಿಂದಲೇ ಅವರು ದೇಶವಿರೋಧಿ ಘೋಷಣೆ ಕೂಗುವವರನ್ನು ಬೆಂಬಲಿಸುತ್ತಿದ್ದಾರೆ ಎಂದು ಅವನು ಹೇಳಿಕೊಂಡಿದ್ದಾನೆ ವಿದ್ಯಾರ್ಥಿಯ ಪ್ರಕಾರ ಕೆಜಿಯುಎಂನ ಮೆಂಟಲ್ ವಿಭಾಗದಲ್ಲಿ ರಾಹುಲ್‌ಗೆ ಚಿಕಿತ್ಸೆ ಕೊಡಿಸಬೇಕಾಗಿದೆ ಎಂದು ಹೇಳಿದ್ದಾರೆ. ರಾಹುಲ್ ಗಾಂಧಿಯ ಹೆಸರು ಅವರ ವಿಳಾಸ ತಂದೆಯ ಹೆಸರನ್ನು ಸರಿಯಾಗಿ ದಾಖಲಿಸಿರುವ ಈ ಭೂಪ ರಿಜಿಸ್ಟ್ರೇಶನ್ ಕೂಡ ಮಾಡಿಸಿದ್ದಾನೆ. ಯುನಿವರ್ಸಿಟಿ ಕುಲಪತಿ ಪ್ರೋರವಿಕಾಂತ್‌ರು ಈ ಕಾರ್ಡ್ ಮಾಡಿದ ಕ್ಲರ್ಕ್‌ನ್ನು ಸೇವೆಯಿಂದ ತೆಗೆದು ಹಾಕಲಾಗಿದೆ. ಜೊತೆಗೆ ಒಬ್ಬ ವೈದ್ಯರನ್ನು ಅಮಾನತುಗೊಳಿಸಲಾಗಿದೆ. ಪ್ರಕರಣದ ತನಿಖೆ ನಡೆಸಲಾಗುತ್ತಿದೆ. ಅಗತ್ಯಬಿದ್ದರೆ ಎಫ್‌ಐಆರ್ ದಾಖಲಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News