×
Ad

ರಿಯೋ ಓಪನ್: ನಡಾಲ್‌ಗೆ ಜಯ

Update: 2016-02-17 23:51 IST

  ರಿಯೋ ಡಿ ಜನೈರೊ, ಫೆ.17: ರಿಯೋ ಓಪನ್‌ನಲ್ಲಿ ಪುರುಷರ ಸಿಂಗಲ್ಸ್‌ನಲ್ಲಿ ಸ್ವದೇಶದ ಪಾಬ್ಲೊ ಕಾರ್ರೆನೊರನ್ನು 6-1, 6-4 ಸೆಟ್‌ಗಳ ಅಂತರದಿಂದ ಮಣಿಸಿರುವ ರಫೆಲ್ ನಡಾಲ್ ದ್ವಿತೀಯ ಸುತ್ತಿಗೆ ತಲುಪಿದ್ದಾರೆ.

ಮತ್ತೊಂದು ಸಿಂಗಲ್ಸ್ ಪಂದ್ಯದಲ್ಲಿ ನಂ.2ನೆ ಆಟಗಾರ ಡೇವಿಡ್ ಫೆರರ್ ಅವರು ಚಿಲಿಯ ನಿಕೊಲಸ್ ಜರ್ರಿ ಅವರನ್ನು 6-3, 7-6(3) ಸೆಟ್‌ಗಳ ಅಂತರದಿಂದ ಸೋಲಿಸಿದ್ದಾರೆ.

 ಮಹಿಳೆಯರ ವಿಭಾಗದಲ್ಲಿ ಅಗ್ರ ಶ್ರೇಯಾಂಕದ ಬ್ರೆಝಿಲ್‌ನ ಟೆಲಿಯನಾ ಪೆರೇರಾ ಅವರು ಕ್ರೊವೇಷಿಯದ ಪೆಟ್ರಾ ಮಾರ್ಟಿಕ್ ವಿರುದ್ಧ 6-3, 7-5 ಸೆಟ್‌ಗಳ ಅಂತರದಿಂದ ಸೋತಿದ್ದಾರೆ. ಒಲಿಂಪಿಕ್ಸ್ ಅತ್ಯಂತ ಪ್ರಮುಖ ಟೂರ್ನಿ. ಅದು ನನ್ನ ಪಾಲಿಗೆ ವಿಶೇಷವಾದುದು. ಪ್ರಸ್ತುತ ರಿಯೋದಲ್ಲಿ ಎಟಿಪಿ ಟೂರ್ನಮೆಂಟ್ ಆಡುವತ್ತ ಗಮನ ನೀಡುವೆ ಎಂದು ನಡಾಲ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News