ಅಥ್ಲೆೆಟಿಕ್ಸ್ ಕೂಟ: ಸುಲೈಮಾನ್, ಹಾರೂನ್ ವಿಶ್ವ ದಾಖಲೆ
Update: 2016-02-18 23:54 IST
ಸ್ಟಾಕ್‌ಹೋಮ್, ಫೆ.18: ಇಲ್ಲಿ ನಡೆಯುತ್ತಿರುವ ಗ್ಲೊಬೆನ್ ಗಾಲನ್ ಕ್ರೀಡಾಕೂಟದಲ್ಲಿ 1000 ಮೀ. ಓಟದಲ್ಲಿ ಅಯಾನ್‌ಲೆ ಸುಲೈಮಾನ್ 16 ವರ್ಷಗಳ ಹಳೆಯ ವಿಶ್ವ ದಾಖಲೆಯನ್ನು ಮುರಿದು ಹೊಸ ದಾಖಲೆ ನಿರ್ಮಿಸಿದರು.
2:14:20 ನಿಮಿಷದಲ್ಲಿ ಗುರಿ ತಲುಪಿದ ಸುಲೈಮಾನ್ 16 ವರ್ಷಗಳ ಹಿಂದೆ ವಿಲ್ಸನ್ ಕಿಪ್‌ಕೆಟರ್ ನಿರ್ಮಿಸಿದ್ದ ವಿಶ್ವ ದಾಖಲೆಯನ್ನು ಮುರಿದರು.
500 ಮೀ. ಓಟದಲ್ಲಿ ಕತರ್‌ನ 19ರಹರೆಯದ ಅಬ್ದಾಲೇ ಹಾರೂನ್ 59.83 ಸೆಕೆಂಡ್‌ನಲ್ಲಿ ಗುರಿ ತಲುಪಿ ಮತ್ತೊಂದು ವಿಶ್ವ ದಾಖಲೆ ಬರೆದರು. ಅಥ್ಲೀಟ್ ಚರಿತ್ರೆಯಲ್ಲಿ 60 ಸೆಕೆಂಡ್ ಒಳಗೆ ಗುರಿ ತಲುಪಿದ ಮೊದಲ ಅಥ್ಲೀಟ್ ಎಂಬ ಹಿರಿಮೆಗೆ ಹಾರೂನ್ ಪಾತ್ರರಾದರು.