×
Ad

2024ರ ಒಲಿಂಪಿಕ್ಸ್ ಗೇಮ್ಸ್‌ಗೆ ಬಿಡ್ ಪ್ರಕ್ರಿಯೆ ಆರಂಭ

Update: 2016-02-18 23:59 IST

 ಪ್ಯಾರಿಸ್, ಫೆ.18: ನಾಲ್ಕು ನಗರಗಳಾದ ಪ್ಯಾರಿಸ್, ರೋಮ್, ಲಾಸ್ ಏಂಜಲೀಸ್ ಹಾಗೂ ಬುಡಾಪೆಸ್ಟ್ 2024ರ ಒಲಿಂಪಿಕ್ ಗೇಮ್ಸ್ ಆತಿಥ್ಯಕ್ಕಾಗಿ ಬಿಡ್ ಪ್ರಕ್ರಿಯೆ ಆರಂಭಿಸಿವೆ ಎಂದು ಅಂತಾರಾಷ್ಟ್ರೀಯ ಒಲಿಂಪಿಕ್ಸ್ ಸಮಿತಿ(ಐಒಸಿ) ಧೃಢಪಡಿಸಿದೆ.

‘‘2020ರ ಒಲಿಂಪಿಕ್ ಕಾರ್ಯಸೂಚಿಯನ್ವಯ ಲಾಸ್ ಏಂಜಲೀಸ್, ರೋಮ್, ಬುಡಾಪೆಸ್ಟ್ ಹಾಗೂ ಪ್ಯಾರಿಸ್ ಬಿಡ್ ಸಲ್ಲಿಸಿವೆ’’ಎಂದು ಐಒಸಿ ಅಧ್ಯಕ್ಷ ಥಾಮಸ್ ಬಾಕ್ ಬುಧವಾರ ಹೇಳಿದ್ದಾರೆ.

ಒಲಿಂಪಿಕ್ಸ್ ಆತಿಥ್ಯ ರಾಷ್ಟ್ರಗಳ ಆಯ್ಕೆಗೆ ಮತದಾನದ ಪ್ರಕ್ರಿಯೆ ಸೆ.13, 2017ರಲ್ಲಿ ಪೆರು ರಾಜಧಾನಿ ಲಿಮಾದಲ್ಲಿ ಆರಂಭವಾಗಲಿದೆ ಎಂದು ನ್ಯೂಸ್ ಏಜೆನ್ಸಿ ವರದಿ ಮಾಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News