×
Ad

ಜಿದ್ದ: ಬವಾದಿಯದಲ್ಲಿ 400 ಮಂದಿಯ ಬಂಧನ

Update: 2016-02-19 18:55 IST

ಜಿದ್ದಾ, ಫೆ.19: ಕೆಲಸದ ವಾಸ್ತವ್ಯ ಕಾನೂನು ಉಲ್ಲಂಘಿಸಿದವರನ್ನು ಪತ್ತೆಹಚ್ಚಲಿಕ್ಕಾಗಿ ಪೊಲೀಸರು ನಡೆಸಿದ ದಾಳಿಯಲ್ಲಿ 400ರಷ್ಟು ಮಂದಿಯನ್ನು ಸೆರೆಹಿಡಿಯಲಾಗಿದೆ. ಜಿದ್ದ ಪೊಲೀಸ್ ಮುಖಂಡ ಕರ್ನಲ್ ಮಸೂದ್ ಬಿನ್ ಫೈಝಲ್ ಅದ್ವಾನಿ ಉಸ್ತುವಾರಿಯಲ್ಲಿ ನಿನ್ನೆ ಬೆಳಗ್ಗೆ ಈ ದಾಳಿ ನಡೆದಿತ್ತು. ಅಕಾಮದ ಅವಧಿ ಮುಗಿದವರು. ನಕಲಿ ಅಕಾಮ ಹೊಂದಿದವರು, ಅಪರಾಧಕೃತ್ಯದಲ್ಲಿ ಬಂಧಿಸಲ್ಪಡಬೇಕಿದ್ದವರು, ನುಸುಳುಕೋರರು, ಸ್ಪೋನ್ಸರ್ ಅಧೀನದಲ್ಲಿಲ್ಲದವರನ್ನು ಬಂಧಿಸಲಾಗಿದೆ. ಕಾನೂನು ಉಲ್ಲಂಘಿಸಿ ನಡೆಸಲಾಗುತ್ತಿದ್ದ ಟೈಲರಿಂಗ್ ಅಂಗಡಿಗಳು, ಫರ್ನಿಚರ್, ಜಿಪ್ಸಂವರ್ಕ್‌ಶಾಪ್‌ಗಳು, ಗೋಡೌನುಗಳನ್ನೂ ಪತ್ತೆಹಚ್ಚಲಾಗಿದೆ. ಕಾನೂನು ಉಲ್ಲಂಘಿಸಿದವರಿಗೆ ವಾಸ್ತವ್ಯ ಕಲ್ಪಿಸಿದ್ದ ನಲ್ವತ್ತೆಂಟು ಮನೆಗಳ ವಿದ್ಯುತ್ ಕಡಿತಗೊಳಿಸಲು ಸೂಚನೆ ನೀಡಲಾಗಿದೆ ಮತ್ತು ಅವರು ವಾಸ್ತವ್ಯವಿದ್ದ ಕಟ್ಟಡದ ಮಾಲಕರನ್ನು ವಿಚಾರಣೆಗೆ ಕರೆಸಿಕೊಳ್ಳಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News