ಉಕ್ರೆನ್‌ನಲ್ಲಿ ಸಂಘರ್ಷದಿಂದ 80ಸಾವಿರ ಮಕ್ಕಳು ಸಂತ್ರಸ್ತರು : ವಿಶ್ವಸಂಸ್ಥೆ
Update: 2016-02-19 19:04 IST
ವಿಶ್ವಸಂಸ್ಥೆ: ಯುನಿಸೆಫ್ ಉಕ್ರೆನ್ ಸಂಘರ್ಷದಿಂದ ಪ್ರಕ್ಷುಬ್ಧಗೊಂಡಿರುವ ಕ್ಷೇತ್ರಗಳಲ್ಲಿ 80ಸಾವಿರಕ್ಕೂ ಅಧಿಕ ಮಕ್ಕಳು ಸಂತ್ರಸ್ತರಾಗಿದ್ದಾರೆ. ವಿಶ್ವಸಂಸ್ಥೆ ಎಜೆನ್ಸಿ ವರದಿ ಪ್ರಕಾರ ಎರಡುಲಕ್ಷಕ್ಕೂ ಅಧಿಕ ಮಕ್ಕಳಿಗೆ ಸಹಾಯದ ಆವಶ್ಯಕತೆ ಇದೆ. ಉಕ್ರೆನ್ ಕ್ರೀಮಿಯವನ್ನು ತನ್ನೊಂದಿಗೆ ಸೇರಿಸಿದ ನಂತರ ಅದು ರಷ್ಯದೊಂದಿಗೆ ಯುದ್ಧ ನಿರತವಾಗಿದೆ. ಉಕ್ರೆನ್ ಯುನಿಸೆಫ್ ಪ್ರತಿ ನಿಧಿ ಜಿಯೋವಾನ ಬಾರ್ಬರಿಸ್ " ಎರಡು ವರ್ಷದಿಂದ ಮುಂದುವರಿಯುತ್ತಿರುವ ಹಿಂಸೆ ಗೋಲಿಬಾರು ಮತ್ತು ಭಯ ಪೂರ್ವ ಉಕ್ರೆನ್‌ನಲ್ಲಿ ಸಾವಿರಾರು ಮಕ್ಕಳ ಮೇಲೆ ಪ್ರಭಾವವಾಗಿದೆ. ಸಂಘರ್ಷ ನಡೆಯುತ್ತಿದ್ದರೂ ನಾವು ತಾತ್ಕಾಲಿಕವಾಗಿ ಈ ಮಕ್ಕಳ ಆವಶ್ಯಕತೆಯನ್ನು ಪೂರೈಸುತ್ತಿದ್ದೇವೆ " ಎಂದು ಹೇಳಿದ್ದಾರೆ.