×
Ad

ಮಾರ್ಚ್‌ನಲ್ಲಿ ಮೋದಿ, ಶರೀಫ್ ಭೇಟಿ?

Update: 2016-02-19 23:21 IST

ಇಸ್ಲಾಮಾಬಾದ್, ಫೆ. 19: ಅಮೆರಿಕದ ಅಧ್ಯಕ್ಷ ಬರಾಕ್ ಒಬಾಮ ಮುಂದಿನ ತಿಂಗಳು ಏರ್ಪಡಿಸಿರುವ ಪರಮಾಣು ಶೃಂಗ ಸಮ್ಮೇಳನವೊಂದರ ನೇಪಥ್ಯದಲ್ಲಿ ಭಾರತ ಮತ್ತು ಪಾಕಿಸ್ತಾನಗಳ ಪ್ರಧಾನಿಗಳು ಭೇಟಿಯಾಗುವ ಸಾಧ್ಯತೆಯಿದೆ ಎಂದು ಪಾಕಿಸ್ತಾನದ ‘ಡಾನ್’ ಪತ್ರಿಕೆ ವರದಿ ಮಾಡಿದೆ.

ಮಾರ್ಚ್ 31 ಮತ್ತು ಎಪ್ರಿಲ್ 1ರಂದು ವಾಶಿಂಗ್ಟನ್‌ನಲ್ಲಿ ನಡೆಯಲಿರುವ ಪರಮಾಣು ಶೃಂಗಸಭೆಯಲ್ಲಿ ಭಾಗವಹಿಸುವ ಆಹ್ವಾನವನ್ನು ಭಾರತದ ಪ್ರಧಾನಿ ನರೇಂದ್ರ ಮೋದಿ ಮತ್ತು ಪಾಕಿಸ್ತಾನದ ಪ್ರಧಾನಿ ನವಾಝ್ ಶರೀಫ್ ಇಬ್ಬರು ಸ್ವೀಕರಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News