×
Ad

ಪಠಾಣ್‌ಕೋಟ್ ದಾಳಿ ಪಾಕಿಸ್ತಾನದಲ್ಲಿ ಮೊಕದ್ದಮೆ ದಾಖಲು

Update: 2016-02-19 23:22 IST

ಇಸ್ಲಾಮಾಬಾದ್, ಫೆ. 19: ಪಾಣ್‌ಕೋಟ್ ಭಯೋತ್ಪಾದಕ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಪಾಕಿಸ್ತಾನದ ಅಧಿಕಾರಿಗಳು ಮೊಕದ್ದಮೆಯೊಂದನ್ನು ದಾಖಲಿಸಿಕೊಂಡಿದ್ದಾರೆ ಎಂದು ಅಧಿಕಾರಿಗಳು ಶುಕ್ರವಾರ ತಿಳಿಸಿದರು.
 ಘಟನೆಯ ಬಗ್ಗೆ ವಾರಗಳ ಕಾಲ ಪಾಕಿಸ್ತಾನಿ ಅಧಿಕಾರಿಗಳು ತನಿಖೆ ನಡೆಸಿದ ಬಳಿಕ ಈ ಬೆಳವಣಿಗೆ ಸಂಭವಿಸಿದೆ.

ಪಾಕಿಸ್ತಾನದ ಪಂಜಾಬ್ ರಾಜ್ಯದ ಗುಜ್ರನ್‌ವಾಲದಲ್ಲಿರುವ ಭಯೋತ್ಪಾದನೆ ನಿಗ್ರಹ ಇಲಾಖೆ ಕೇಂದ್ರದಲ್ಲಿ ಗುರುವಾರ ಮೊಕದ್ದಮೆ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News