ಮೋದಿಗೆ ಕಪ್ಪು ಬಾವುಟ ತೋರಿಸಲು ಅನುಮತಿ ಕೇಳಿದ ದಲಿತ ಯುವಕರಿಬ್ಬರ ಬಂಧನ
Update: 2016-02-19 23:45 IST
ಹೊಸದಿಲ್ಲಿ, ಫೆ.19: ಪ್ರಧಾನಿ ನರೇಂದ್ರ ಮೋದಿ ಫೆ.22ರಂದು ಬನಾರಸ್ ಹಿಂದೂ ವಿಶ್ವವಿದ್ಯಾನಿಲಯಕ್ಕೆ ಭೇಟಿ ನೀಡುವ ವೇಳೆ ಅವರಿಗೆ ಕರಿ ಬಾವುಟ ತೋರಿಸಲು ಅನುಮತಿ ನೀಡುವಂತೆ ಕೋರಿ ವಾರಣಾಸಿಯ ಜಿಲ್ಲಾ ದಂಡಾಧಿಕಾರಿಯನ್ನು ಭೇಟಿಯಾಗಿದ್ದ ಇಬ್ಬರು ದಲಿತ ಯುವಕರನ್ನು ಗುರುವಾರ ಬಂಧಿಸಲಾಗಿದೆ.
ಭಾರತ್ ಮುಕ್ತಿ ಮೋರ್ಚಾದ ಯುವ ಘಟಕ ಭಾರತೀಯ ವಿದ್ಯಾರ್ಥಿ ಮೋರ್ಚಾವನ್ನು ಪ್ರತಿನಿಧಿಸುವ ಈ ಯುವಕರನ್ನು ಶಾಂತಿಭಂಗದ ಆರೋಪದ ಮೇಲೆ ಬಂಧಿಸಲಾಗಿದೆ.
ಅಖಿಲ ಭಾರತ ಹಿಂದುಳಿದ ಹಾಗೂ ಅಲ್ಪಸಂಖ್ಯಾತ ಸಮುದಾಯಗಳ ನೌಕರರ ಒಕ್ಕೂಟಕ್ಕೆ (ಬಿಎಎಂಸಿಇಎಫ್) ಸಂಯೋಜಿತವಾಗಿರುವ ಬಿವಿಎಂ, ಹೈದರಾಬಾದ್ ವಿವಿಯ ದಲಿತ ಸಂಶೋಧನ ವಿದ್ಯಾರ್ಥಿ ರೋಹಿತ್ ವೇಮುಲಾರ ಆತ್ಮಹತ್ಯೆಯ ಬಗ್ಗೆ ಕರಿ ಬಾವುಟ ಪ್ರದರ್ಶನಕ್ಕೆ ಕರೆ ನೀಡಿತ್ತು.