ಅಸ್ಸಾಂನಲ್ಲಿ ಪರಿಶಿಷ್ಟ ಪಂಗಡಕ್ಕೆ ಸೇರಿಸುವಂತೆ ಆಗ್ರಹಿಸಿ ಆದಿವಾಸಿಗಳಿಂದ ರೈಲು ತಡೆ

Update: 2016-02-22 10:05 GMT

ಗುವಾಹಟಿ, ಫೆ.22: ಜಾಟ್‌ ಸಮುದಾಯದ ಮೀಸಲಾತಿ ಚಳುವಳಿಯಿಂದ ಕಂಡು ಬಂದಿರುವ  ಹಿಂಸಾಚಾರ ಇನ್ನೂ ನಿಂತಿಲ್ಲ. ಇದೀಗ ಅಸ್ಸಾಂನಲ್ಲಿ ಆದಿವಾಸಿಗಳ ಸರದಿ. ಸುಮಾರು ಐದು ಸಾವಿರ ಮಂದಿ ಆದಿವಾಸಿಗಳು ಪಶ್ಚಿಮ ಅಸ್ಸಾಂನ ಕೊಕ್ರಾಜಾರ್‌ ರೈಲು ನಿಲ್ದಾಣದಲ್ಲಿ ರೈಲು ತಡೆದು ಆದಿವಾಸಿಗಳನ್ನು  ಪರಿಶಿಷ್ಟ ಪಂಗಡ (ಎಸ್‌ಟಿ) ಪಟ್ಟಿಯಲ್ಲಿ ಸೇರಿಸುವಂತೆ ಒತ್ತಾಯಿಸಿದರು.
ಹದಿಮೂರು ಆದಿವಾಸಿ ಸಂಘಟನೆಗಳ ವೇದಿಕೆ  ಆದಿವಾಸಿ ನ್ಯಾಶನಲ್‌  ಕನ್ವೆಂಶನ್‌ ಕಮಿಟಿ (ಎಎನ್ ಸಿಸಿ) ನೇತೃತ್ವದಲ್ಲಿ ಆದಿವಾಸಿಗಳು ಬೆಳಗ್ಗೆ ಎಂಟು ಗಂಟೆಗೆ ರೈಲು ನಿದ್ದಾಣದಲ್ಲಿ ಪ್ರತಿಭಟನೆ ಆರಂಭಿಸಿದ ಪರಿಣಾಮವಾಗಿ ಈಶಾನ್ಯ ಗಡಿ ವಲಯದ (ಎನ್.ಎಫ್) ಹಲವು ರೈಲುಗಳ ಸಂಚಾರಕ್ಕೆ ಧಕ್ಕೆ ಉಂಟಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News