ಶರಾಬು ಕುಡಿದು ಇಲ್ಲೊಬ್ಬ ಮಗ ಹೆತ್ತತಾಯಿಯನ್ನೇ ಇಟ್ಟಿಗೆಯಿಂದ ಹೊಡೆದು ಕೊಂದ!
ಮೈನ್‌ಪುರಿ,ಫೆ22: ಇಲ್ಲೊಬ್ಬಮಗ ಪಾನಮತ್ತನಾಗಿ ತನ್ನ ತಾಯಿಯನ್ನೇ ಕಲ್ಲು ಹಾಕಿ ಕೊಂದಿದ್ದಾನೆ. ಶರಾಬಿನ ನಶೆ ಎಂತಹಾ ಕುಕೃತ್ಯವನ್ನೂ ಮಾಡಿಸುತ್ತಿದೆ ಎಂಬುದಕ್ಕೆ ಇದೊಂದು ಹೃದಯವಿದ್ರಾವಕ ತಾಜಾ ಉದಾಹರಣೆಯಾಗಿದೆ. ಉತ್ತರಪ್ರದೇಶದ ಮೈನ್‌ಪುರಿ ಠಾಣೆ ವ್ಯಾಪ್ತಿಯ ದನ್ನಾಹಾರ್‌ನಲ್ಲಿ ಮಗನೇ ತನ್ನ ತಾಯಿ ಮಂಡೆ ಒಡೆದಿದ್ದಾನೆ. ವೃದ್ಧೆಯನ್ನು ಆಸ್ಪತ್ರೆಗೆ ಸಾಗಿಸಲಾಯಿತಾದರೂ ಉಳಿಸಿಕೊಳ್ಳಲು ಸಾಧ್ಯವಾಗಿಲ್ಲ. ಆರೋಪಿ ಮಗನನ್ನು ಪೊಲೀಸರು ಬಂಧಿಸಿದ್ದಾರೆ.
ಶನಿವಾರದಂದು ಸುಬೋಧ್ ಕುಮಾರ್ ಎಂಬಾತ ಪಾನಮತ್ತನಾಗಿ ಮನೆಗೆ ಬಂದಿದ್ದ. ಅವನ ತಾಯಿ ಅರುವತ್ತೈದು ವರ್ಷದ ತಾಯಿ ಅವನಿಗೆ ಶರಾಬು ಕುಡಿಯದಂತೆ ಬುದ್ಧಿವಾದ ಹೇಳಿದ್ದರು. ಆಗ ಸುಬೋಧ್ ಕೈಯಲ್ಲಿ ಇಟ್ಟಿಗೆ ಹಿಡಿದು ಕೊಂಡು ಬಂದು ನನ್ಹಿದೇವಿಯ ಮೇಲೆ ಎಸೆದಿದ್ದಾನೆ. ಬೊಬ್ಬೆ ಕೇಳಿ ಸುಬೋಧ್‌ನ ಚಿಕ್ಕಪ್ಪ ಅವಧೇಶ್ ಕುಮಾರ ಅಲ್ಲಿಗೆ ತಲುಪಿದಾಗ ನನ್ಹಿದೇವಿಯನ್ನು ಜಿಲ್ಲಾಸ್ಪತ್ರೆಗೆ ಸಾಗಿಸಿದ್ದಾರೆ. ಅಲ್ಲಿ ವೈದ್ಯರು ನನ್ಹಿದೇವಿ ಮೃತರಾಗಿದ್ದಾರೆ ಎಂದು ಘೋಷಿಸಿದರು.ವಿಷಯ ತಿಳಿದು ಸ್ಥಳಕ್ಕೆ ಧಾವಿಸಿದ ಪೊಲೀಸರು ಸುಬೋಧ್‌ನನ್ನು ವಶಕ್ಕೆ ಪಡೆದಿದ್ದಾರೆ.