ಡಿ.ರಾಜಾ ತನ್ನ ಮಗಳನ್ನು ಗುಂಡಿಟ್ಟು ಸಾಯಿಸಿ ದೇಶಪ್ರೇಮ ಸಾಬೀತು ಪಡಿಸಲಿ: ಬಿಜೆಪಿಯ ಎಚ್.ರಾಜಾ
ಜೆಎನ್‌ಯುನ ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಕಮ್ಯುನಿಸ್ಟ್ ನೇತಾರ ಡಿ. ರಾಜಾರ ಮಗಳ ಕುರಿತು ಪ್ರತಿಕ್ರಿಯಿಸಿದ ತಮಿಳ್ನಾಡು ಬಿಜೆಪಿ ವರಿಷ್ಠ ಎಚ್.ರಾಜಾ, ಡಿ.ರಾಜಾ ದೇಶಭಕ್ತಿ ಸಾಬೀತು ಗೊಳಿಸಲಿಕ್ಕಾಗಿ ತನ್ನಮಗಳನ್ನು ಗುಂಡಿಟ್ಟು ಕೊಲ್ಲಬೇಕೆಂದು ಗುಡುಗಿದ್ದಾರೆ.
ಅವರು ತನ್ನ ಮಗಳಿಗೆ ಗುಂಡುಹಾರಿಸಲು ತನ್ನ ಸಹ ಕಾಮ್ರೆಡ್‌ಗಳಿಗೆ ಹೇಳಲಿ. ಒಂದು ವೇಳೆ ಡಿ.ರಾಜಾರ ಬದಲು ತಾನಾಗಿರುತ್ತಿದ್ದರೆ ಹಾಗೆಯೇ ಮಾಡುತ್ತಿದ್ದೆ ಎಂದು ಬಿಜೆಪಿಯ ರಾಷ್ಟ್ರೀಯ ಕಾರ್ಯದರ್ಶಿಯಾಗಿರುವ ಎಚ್.ರಾಜಾ ಹೇಳಿ ವಿವಾದ ಹುಟ್ಟುಹಾಕಿದ್ದಾರೆ. ಕೊಯಮತ್ತೂರಿನಲ್ಲಿ ಒಂದು ಪತ್ರಿಕಾಗೊಷ್ಠಿಯಲ್ಲಿ ಶನಿವಾರ ಇಂತಹ ಉದ್ರಿಕ್ತ ಹೇಳಿಕೆ ನೀಡಿದ್ದಾರೆ. ಕಮ್ಯುನಿಸ್ಟ್ ನಾಯಕ ಸೀತಾರಾಂ ಯೆಚೂರಿ ಮತ್ತು ರಾಹುಲ್ ಗಾಂಧಿಯವರನ್ನು ಜೆಎನ್‌ಯು ವಿಚಾರದಲ್ಲಿ ರಾಷ್ಟ್ರದ್ರೋಹಿಗಳೆಂದು ಎಚ್.ರಾಜಾ ಹೇಳಿದ್ದಾರೆ. ಕಮ್ಯುನಿಸ್ಟ್ ಪಾರ್ಟಿಗೆ ಜೆಎನ್‌ಯುನಲ್ಲಿ ಕೆಲವು ರಾಷ್ಟ್ರವಿರೋಧಿ ಕೃತ್ಯ ನಡೆಯುತ್ತಿದೆ ಎಂದು ಗೊತ್ತಿತ್ತು ಎಂದೂ ಹೇಳಿದ್ದಾರೆ.
ರವಿವಾರ ಅವರ ಹೇಳಿಕೆ ಪತ್ರಿಕೆಯಲ್ಲಿ ಪ್ರಕಟವಾದಾಗ ತನ್ನ ಮಾತಿನ ಅರ್ಥ ಕೊಲೆ ನಡೆಸಬೇಕೆಂದಾಗಿರಲಿಲ್ಲ ಎಂದು ತಿದ್ದಿಕೊಂಡಿದ್ದಾರೆ. ಸಿಪಿಐ ನಾಯಕ ಡಿ.ರಾಜಾ ಬಿಜೆಪಿ ಕಾರ್ಯದರ್ಶಿಯ ಮಾತಿಗೆ ಪ್ರತಿಕ್ರಿಯೆ ನೀಡುವ ಗೋಜಿಗೆ ಹೋಗಿಲ್ಲ. ಆದರೆ ಹಿಟ್ಲರ್‌ನೊಂದಿಗೆ ಅವರನ್ನು ಹೋಲಿಸಿದ್ದಾರೆ.
ಎಚ್ ರಾಜಾ ದ್ರಾವಿಡರ ಆದರ್ಶ ವ್ಯಕ್ತಿ ಪೆರಿಯಾರ್, ಕ್ರೈಸ್ತರು ಹಾಗೂ ಮುಸ್ಲಿಮರ ವಿರುದ್ಧ ಹೇಳಿಕೆ ನೀಡಿದ್ದಕ್ಕಾಗಿ ವಿಚಾರಣೆ ಎದುರಿಸಿದ್ದರು.