×
Ad

ಸುಪ್ರೀಂಗೆ ಮಧ್ಯಂತರ ಅರ್ಜಿ ಸಲ್ಲಿಕೆಗೆ ಎಂಸಿಎ ನಿರ್ಧಾರ

Update: 2016-02-22 23:55 IST

ಮುಂಬೈ, ಫೆ.22: ನಿವೃತ್ತ ಜಸ್ಟಿಸ್ ಆರ್.ಎಂ. ಲೋಧಾ ಸಮಿತಿಯ ಶಿಫಾರಸುಗಳನ್ನು ಜಾರಿಗೆ ತರುವುದು ತುಂಬಾ ಕಷ್ಟಕರ ಎಂದು ತೀರ್ಮಾನಿಸಿರುವ ಬಿಸಿಸಿಐ ಮಾಜಿ ಅಧ್ಯಕ್ಷ ಶರದ್ ಪವಾರ್ ನೇತೃತ್ವದ ಮುಂಬೈ ಕ್ರಿಕೆಟ್ ಅಸೋಸಿಯೇಶನ್(ಎಂಸಿಎ) ಈ ಕುರಿತು ಸುಪ್ರೀಂಕೋರ್ಟ್‌ಗೆ ಮಧ್ಯಂತರ ಅರ್ಜಿಯನ್ನು ಸಲ್ಲಿಸಲು ನಿರ್ಧರಿಸಿದೆ.

ಎಂಸಿಎ ಆಡಳಿತ ಸಮಿತಿಯಲ್ಲಿ ಈ ನಿರ್ಧಾರಕ್ಕೆ ಬರಲಾಗಿದ್ದು, ಈ ಕುರಿತು ಸೋಮವಾರ ಅಸೋಸಿಯೇಶನ್‌ನ ಜೊತೆ ಕಾರ್ಯದರ್ಶಿಗಳಾದ ಪಿ.ವಿ.ಶೆಟ್ಟಿ ಹಾಗೂ ಉನ್ಮೇಶ್ ಖಾನ್ವೀಲ್ಕರ್ ಮಾಧ್ಯಮಗಳಿಗೆ ಹೇಳಿಕೆ ಬಿಡುಗಡೆ ಮಾಡಿದ್ದಾರೆ.

ಲೋಧಾ ಸಮಿತಿಯ ಶಿಫಾರಸಿನ ಬಗ್ಗೆ ಎಂಸಿಎ ಆಡಳಿತ ಸಮಿತಿಯಲ್ಲಿ ಚರ್ಚೆ ನಡೆಸಲಾಗಿದೆ. ಸುಪ್ರೀಂಕೋರ್ಟ್‌ಗೆ ಮಧ್ಯಂತರ ಅರ್ಜಿಯನ್ನು ಸಲ್ಲಿಸುವ ಕುರಿತು ಸಭೆಯಲ್ಲಿ ಒಮ್ಮತದ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಮಾಧ್ಯಮ ಪ್ರಕಟನೆಯಲ್ಲಿ ತಿಳಿಸಲಾಗಿದೆ.

ಲೋಧಾ ಸಮಿತಿಯ ‘ಒಂದೇ ರಾಜ್ಯ, ಒಂದೇ ಮತ’ ಎನ್ನುವ ಶಿಫಾರಸು ಎಂಸಿಎಗೆ ನೇರ ಪ್ರಭಾವ ಬೀರಲಿದೆ. ಮಹಾರಾಷ್ಟ್ರ ರಾಜ್ಯದಲ್ಲಿ ಬಿಸಿಸಿಐ ಮಾನ್ಯತೆಯಿರುವ ನಾಲ್ಕು ಕ್ರಿಕೆಟ್ ಸಂಸ್ಥೆಗಳಿವೆ. ಮುಂಬೈನಲ್ಲಿ 2, ಪುಣೆ ಹಾಗೂ ನಾಗ್ಪುರಗಳಲ್ಲಿ ತಲಾ ಒಂದು ಸಂಸ್ಥೆಯಿದೆ.

70ವರ್ಷಕ್ಕಿಂತ ಹೆಚ್ಚು ವಯಸ್ಸಿನ ವ್ಯಕ್ತಿ ಬಿಸಿಸಿಐ ಅಧಿಕಾರಿಗಳಾಗುವಂತಿಲ್ಲ ಎಂದು ಲೋಧಾ ಸಮಿತಿಯ ಮತ್ತೊಂದು ಶಿಫಾರಸಾಗಿದೆ. ಎಂಸಿಎ ಅಧ್ಯಕ್ಷ ಪವಾರ್‌ಗೆ 75 ವರ್ಷ ಅವರಿಗೆ ಇದು ಮುಳುವಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News